ಶಂಕರನಾರಾಯಣ: ವಾರಾಹಿ ಕಾಲುವೆಗೆ ಹಾರಿ ಗೃಹಿಣಿ ಆತ್ಮಹತ್ಯೆ.

ಶಂಕರನಾರಾಯಣ: ಉಳ್ಳೂರು-74 ಗ್ರಾಮದ ದೊಡ್ಮನೆ ಸುನಿತಾ(42) ಅವರು ಮಾನಸಿಕ ಖಾಯಿಲೆಯಿಂದ ಬಳುತ್ತಿದ್ದು, ಇದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಸೆ.9ರಂದು ವಾರಾಹಿ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡರು.

ಸೆ. 8ರ ರಾತ್ರಿ ಊಟ ಮಾಡಿ ಮಲಗಿದ್ದ ಸುನಿತಾ ಅವರು ಮರುದಿನ ಬೆಳಗ್ಗೆ ಅವರು ಕಾಣದಿದ್ದಾಗ ಹುಡುಕಾಡಿದ್ದಾಗ, ವಾರಾಹಿ ಕಾಲುವೆಯ ಸಿಮೆಂಟ್‌ ದಂಡೆಯ ಮೇಲೆ ಸುನಿತಾ ಅವರ ಮೃತ ಪತ್ತೆಯಾಗಿದೆ.

ಹಿಂದೆಯೂ ಎರಡು-ಮೂರು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಪುತ್ರ ಸುಮಂತ್‌(20) ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.