ಶಂಕರನಾರಾಯಣ: ಮಗನ ಸಾವಿನ ಸುದ್ದಿ ತಿಳಿದು ಆಘಾತಗೊಂಡ ತಾಯಿ ಕೆರೆಗೆ ಬಿದ್ದು ಮೃತ್ಯು

ಶಂಕರನಾರಾಯಣ: ಮಗನ ಸಾವಿನ ಸುದ್ದಿ ತಿಳಿದು ಆಘಾತಗೊಂಡ ತಾಯಿ ಗದ್ದೆಯ ಕೆರೆಗೆ ಬಿದ್ದು ಮೃತಪಟ್ಟ ಘಟನೆ ಜ.22ರಂದು ಮಧ್ಯಾಹ್ನ ನಡೆದಿದೆ.

ಮೃತರನ್ನು ವಾರಿಜಾ ಎಂದು ಗುರುತಿಸಲಾಗಿದೆ. ಇವರ ಮಗ ಅರುಣ್ ಎಂಬವರು ಜುಲೈ ತಿಂಗಳಲ್ಲಿ ವಂಡಾರು ಎಂಬಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಕೋಮ ಸ್ಥಿತಿಯಲ್ಲಿದ್ದರು. ಮಲ್ಪೆಯ ತೋನ್ಸೆ ಮನೆಯಲ್ಲಿದ್ದ ಅರುಣ್ ಸೋಮವಾರ ಮೃತಪಟ್ಟರು.

ಈ ವಿಷಯ ತಿಳಿದ ತಾಯಿ ವಾರಿಜಾ ಆಘಾತದಲ್ಲಿ ಗದ್ದೆಯಲ್ಲಿದ್ದ ದನವನ್ನು ಮನೆಗೆ ತರುವ ವೇಳೆ ತೋಟದ ಬದಿಯಲ್ಲಿದ್ದ ಕೆರೆಗೆ ಆಕಸ್ಮಿಕವಾಗಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟರೆಂದು ತಿಳಿದುಬಂದಿದೆ. ಈ ಬಗ್ಗೆ ಶಂಕರ ನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.