ವೃದ್ಧರೊವರ್ವರ ಶವ ಪತ್ತೆ; ಆತ್ಮಹತ್ಯೆ ಶಂಕೆ

ಸುಭ್ರಮಣ್ಯ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ವೃದ್ಧರೊವರ್ವರ ಶವವು ಮನೆಯ ವಠಾರದಲ್ಲಿನ ಹಲಸಿನ ಮರದಲ್ಲಿ ನೇಣುಕುಣಿಕೆಯಲ್ಲಿ ನೇಲತ್ತಿರುವ ಸ್ಥಿತಿಯಲ್ಲಿ ಕಂಡು ಬಂದ ಘಟನೆ ಶನಿವಾರ ಮುಂಜಾನೆ ಬೆಳಕಿಗೆ ಬಂದಿದೆ.
ಮೃತ ವ್ಯಕ್ತಿ ಕೂಲಿ ಕಾರ್ಮಿಕ ತಿಮ್ಮಪ್ಪ (63 ) ಎಂದು ತಿಳಿದು ಬಂದಿದೆ. ವಿಪರೀತ ಕುಡಿತದ ಚಟಹೊಂದಿರುವ ವೃದ್ಧರು ಆತ್ಮಹತ್ಯೆ ಮಾಡಿ ಕೊಂಡಿರ ಬಹುದೆಂಬ ಶಂಕೆ ವ್ಯಕ್ತವಾಗಿದೆ. ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಯ ಶವಗಾರಕ್ಕೆ  ಸಾಗಿಸಲು, ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಉಚಿತ ಅಂಬುಲೇನ್ಸ್ ಸೇವೆ ಒದಗಿಸಿ ನಗರ ಠಾಣೆಗೆ ಸಹಕರಿಸಿದ್ದಾರೆ.