ವಿದೇಶಿ ಸಾಲ ಯೋಜನೆ :ಅರ್ಜಿ ಆಹ್ವಾನ

ಉಡುಪಿ: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ
ನಿಗಮ (ನಿ) ಇವರ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಎನ್.ಎಂ.ಡಿ.ಎಫ್.ಸಿ ಮಾದರಿಯಲ್ಲಿ ಮಾನ್ಯತೆ ಪಡೆದಿರುವ ಯಾವುದೇ ವಿದೇಶ ವಿದ್ಯಾಲಯದಿಂದ ಪದವಿ ಅಥವಾ ಸ್ನಾತಕೋತ್ತರ ಪದವಿ ವ್ಯಾಸಂಗ
ಮಾಡಲು ಬಯಸುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಂದ ವಿದೇಶಿ ವಿದ್ಯಾಭ್ಯಾಸ ಸಾಲ ಯೋಜನೆಯಡಿ ಸಾಲ ಪಡೆಯಲು ನಿಗಮದ
ವೆಬ್‌ಸೈಟ್ kmdconline.karnataka.gov.in ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಆಗಸ್ಟ್ ೩೧ ಕೊನೆಯ ದಿನ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಲ್ಪಸಂಖ್ಯಾತರ ಕಛೇರಿ ದೂ.ಸಂ: ೦೮೨೦-೨೫೭೪೯೯೦ ಅಥವಾ ಉಡುಪಿ
ದೂ.ಸಂಖ್ಯೆ: ೦೮೨೦-೨೫೭೪೫೯೬, ಕಾರ್ಕಳ ದೂ.ಸಂಖ್ಯೆ: ೦೮೨೫೮-೨೩೧೧೦೧ ಹಾಗೂ ಕುಂದಾಪುರ ದೂ.ಸಂಖ್ಯೆ: ೦೮೨೫೪-೨೩೦೩೭೦ ತಾಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ
ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.