ಲೋಕ ಕಲ್ಯಾಣಾರ್ಥಕ್ಕಾಗಿ 1008 ಗಣಯಾಗ

ಉಡುಪಿ: ಉಡುಪಿಯಲ್ಲಿ ಅಪರೂಪದ 1008 ಗಣಯಾಗ ನಡೆದಿದೆ. ಜಿಲ್ಲೆಯ ಕಾಪು ತಾಲೂಕಿನ ಮಜೂರಿನಲ್ಲಿ ನಡೆದ ಈ ಯಾಗವನ್ನು ಲೋಕಕಲ್ಯಾಣಾರ್ಥಕ್ಕಾಗಿ ಆಯೋಜಿಸಲಾಗಿತ್ತು.
ಹತ್ತಾರು ಪುರೋಹಿತರು ಯಜ್ಞದಲ್ಲಿ ಭಾಗವಹಿಸಿದ್ದರು. ಉಡುಪಿಯ ಅಷ್ಟಮಠಗಳಿಗೆ ಸೇರಿದ ದಂಡ ತೀರ್ಥ ಕ್ಷೇತ್ರದ ಅರ್ಚಕರಾಗಿರುವ ಶ್ರೀನಿವಾಸ ಭಟ್ ಈ ಯಾಗ ಆಯೋಜಿಸಿದ್ದರು. ಇದೊಂದು ಅಪರೂಪಕ್ಕೆ ನಡೆಯುವ ಯಾಗವಾಗಿದ್ದು, ಅನೇಕ ಶ್ರದ್ದಾಳುಗಳು ಈ ಗಳಿಗೆಗೆ ಸಾಕ್ಷಿಯಾದರು.