ಲಯನ್ಸ್ ಜಿಲ್ಲೆ 317C ಪ್ರಾಂತ್ಯ 1V ರ ಬ್ಯಾನರ್ ಪ್ರೆಸೆಂಟೇಷನ್ ನಲ್ಲಿ ಪ್ರಥಮ ಸ್ಥಾನ ಪಡೆದ ಲಯನ್ಸ್ ಕ್ಲಬ್ ಹಿರಿಯಡ್ಕ.

ಉಡುಪಿ: ಲಯನ್ಡ್ ಕ್ಲಬ್ ಇಂಟರ್ ನ್ಯಾಷನಲ್ ಪ್ರಾಂತ್ಯ IV ಜಿಲ್ಲೆ 317C ಇದರ ವತಿಯಿಂದ ಫೆಬ್ರವರಿ 2 ರಂದು ಹೆಬ್ರಿಯಲ್ಲಿ ನಡೆದ ಪ್ರಾಂತ್ಯ ಮಟ್ಟದ ಸಮ್ಮೇಳನದಲ್ಲಿ ಜರಗಿದ ಸರ್ವ ಕ್ಲಬ್ ಗಳ ಬ್ಯಾನರ್ ಪ್ರೆಸೆಂಟೇಷನ್ ಕಾರ್ಯಕ್ರಮದಲ್ಲಿ ಲಯನ್ ಸುಧೀರ್ ಹೆಗ್ಡೆಯವರ ನೇತೃತ್ವದ ಲಯನ್ಸ್ ಕ್ಲಬ್ ಹಿರಿಯಡ್ಕ ತಂಡವು ರಕ್ತ ಧಾನದ ಬಗ್ಗೆ ಅರಿವು ಮೂಡಿಸುವ ಜಾಥಾ ಪ್ರದರ್ಶನಕ್ಕೆ ಪ್ರಥಮ ಬಹುಮಾನ ಪಡೆದುಕೊಂಡಿದೆ.

ಕಂದಾಯ ಜಿಲ್ಲೆಗಳಾದ ಉಡುಪಿ ಜಿಲ್ಲೆ, ಶಿವಮೊಗ್ಗ ಜಿಲ್ಲೆ, ದಾವಣಗೆರೆ ಜಿಲ್ಲೆ, ಚಿತ್ರದುರ್ಗ ಜಿಲ್ಲೆ ಗಳನ್ನು ಒಳಗೊಂಡ ಲಯನ್ಸ್ 317 c ಲಯನ್ಸ್ ಜಿಲ್ಲೆಯಲ್ಲಿ ದಾಖಲೆಯ ರಕ್ತಧಾನ ಶಿಬಿರ ನಡೆಸಿ ಇದುವರೆಗಿನ ಲಯನ್ಸ್ ಇತಿಹಾಸದಲ್ಲಿ ಯಾವದೇ ಕ್ಲಬ್ ಮಾಡದ ಸರ್ವಕಾಲಿಕ ದಾಖಲೆಯ ರಕ್ತ ವನ್ನು ಸಂಗ್ರಹಣೆ ಮಾಡಿ ಲಯನ್ಸ್ ಜಿಲ್ಲೆಯಲ್ಲಿ ತನ್ನ ಸೇವಾ ಶಕ್ತಿಯನ್ನು ಪ್ರದರ್ಶನ ಮಾಡಿದೆ.