ರೋಟರಿ ಉಡುಪಿ: ವಿದ್ಯಾರ್ಥಿಗಳ ದತ್ತು ಸ್ವೀಕಾರ

ಉಡುಪಿ: ರೋಟರಿ ಉಡುಪಿ ವತಿಯಿಂದ ವಿದ್ಯಾರ್ಥಿಗಳ ದತ್ತು ಸ್ವೀಕಾರ, ವೈದ್ಯರ ದಿನಾಚರಣೆ, ಪತ್ರಿಕಾ ದಿನಾಚರಣೆ ಮತ್ತು ಲೆಕ್ಕಪರಿಶೋಧಕರ ದಿನಾಚರಣೆ ಕಾರ್ಯಕ್ರಮವು ಸೋಮವಾರ ಮಹಿಷಮರ್ಧಿನಿ ರೋಟರಿ ಸ್ಕೌಟ್ ಸಭಾಂಗಣದಲ್ಲಿ ಸೋಮವಾರ ಜರುಗಿತು.

ರೋಟರಿ ಜಿಲ್ಲಾ ಗವರ್ನರ್ ರೋಟೇರಿಯನ್ ಸಿ.ಎ ದೇವಾನಂದ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರೋಟರಿ ಉಡುಪಿ ಮಾದರಿ ಕಾರ್ಯ ಮಾಡುತಿದ್ದು, ಈ ಸಾಲಿನ ಪ್ರಥಮ ದಿನದಂದೆ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಿ ದಾಖಲೆ ನಿರ್ಮಿಸಿದ್ದಾರೆ ಎಂದರು.

ರೋಟರಿ ಉಡುಪಿ ಅಧ್ಯಕ್ಷ ರೋ। ಗುರುರಾಜ್ ಭಟ್ ಟಿ ಅಧ್ಯಕ್ಷತೆ ವಹಿಸಿದ್ದರು. ಕಡಿಯಾಳಿ ಹಿರಿಯ ಪ್ರಾಥಮಿಕ ಶಾಲೆಯ 21 ವಿದ್ಯಾರ್ಥಿಗಳನ್ನು ದತ್ತು ಸ್ವೀಕಾರ ಮಾಡಲಾಯಿತು. ವೈದ್ಯರ ದಿನಾಚರಣೆ, ಲೆಕ್ಕಪರಿಶೋಧಕರ ದಿನಾಚರಣೆ ಮತ್ತು ಪತ್ರಿಕಾ ದಿನಾಚರಣೆ ಅಂಗವಾಗಿ ಡಾ.ಪ್ರಭಾಕರ್ ಮಲ್ಯ, ಸಿಎ ಪ್ರಶಾಂತ್ ಹೊಳ್ಳ, ಪತ್ರಕರ್ತ ಮೋಹನ ಉಡುಪ ಹಂದಾಡಿ ಅವರುಗಳನ್ನು ಅಭಿನಂದಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಅಸಿಸ್ಟೆಂಟ್ ಗವರ್ನರ್ ರೋ। ಜಗನ್ನಾಥ ಕೋಟೆ, ರೋ| ಹೇಮಂತ್ ಯು.ಕಾಂತ್, ರೋಟರಿ ಉಡುಪಿಯ ನಿಕಟಪೂರ್ವ ಅಧ್ಯಕ್ಷೆ ರೋ.ದೀಪಾ ಭಂಡಾರಿ ಮತ್ತು ವಿವಿಧ ರೋಟರಿ ಸಂಸ್ಥೆಗಳ ಸದಸ್ಯರುಗಳು, ರೋಟರಿ ಉಡುಪಿಯ ಸದಸ್ಯರುಗಳು ಉಪಸ್ಥಿತರಿದ್ದರು.

ರೊ.ಜಗದೀಶ್ ಕಾಮತ್ ನಿರೂಪಿಸಿ, ವನಿತಾ ಉಪಾಧ್ಯಾಯ ಪ್ರಾರ್ಥಿಸಿದರು. ರೊ.ಶುಭಲಕ್ಷ್ಮೀ, ರೋ.ಸುಬ್ರಹ್ಮಣ್ಯ ಕಾರಂತ್, ರೊ.ಅನಂತರಾಮ್ ಬಲ್ಲಾಳ್ ಸನ್ಮಾನಿತರನ್ನು ಪರಿಚಯಿಸಿದರು. ಕಾರ್ಯದರ್ಶಿ ವೈಷ್ಣವಿ ಆಚಾರ್ಯ ವಂದಿಸಿದರು.