ಉಡುಪಿ: ಮೂರು ಬಾರಿ ಗಾಂಧಿ ಗ್ರಾಮ ಪುರಸ್ಕಾರ ಪಡೆದಿರುವ “80 ಬಡಗಬೆಟ್ಟು ಗ್ರಾಮ ಪಂಚಾಯತ್” ವ್ಯಾಪ್ತಿಯ ರಾಜೀವನಗರದಲ್ಲಿ ಹನಿ ನೀರಿಗೂ ಹಾಹಾಕಾರ ಶುರುವಾಗಿದೆ. ಪಂಚಾಯತ್ ನ ಅಸಮರ್ಪಕ ನಿರ್ವಹಣೆಯಿಂದ ರಾಜೀವನಗರ ನಿವಾಸಿಗಳು ಕುಡಿಯುವ ನೀರಿಗೆ ಪರದಾಡುವ ಸ್ಥಿತಿ ನಿರ್ಮಾಣ ಆಗಿದೆ.
ರಾಜೀವನಗರದ ಎತ್ತರದ ಪ್ರದೇಶದಲ್ಲಿ ಕಳೆದ ಒಂದು ವಾರದಿಂದ ನೀರು ಬರುತ್ತಿಲ್ಲ. ಜನರು ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಪ್ರತಿದಿನ ಕುಡಿಯಲು ನೀರಿಗಾಗಿ ಅಲೆದಾಡುವ ಸ್ಥಿತಿ ಉದ್ಭವಿಸಿದೆ. ನೀರಿನ ಮೂಲಕ್ಕೆ ಯಾವುದೇ ತೊಂದರೆ ಇಲ್ಲದಿದ್ದರೂ ನಿರ್ವಹಣೆಯ ಕೊರತೆಯಿಂದ ಕೃತಕ ನೀರಿನ ಅಭಾವ ಉಂಟಾಗಿದೆ.
ನೀರು ಬಿಡುವವನ ಬೇಜಾಬ್ದಾರಿಯಿಂದ ರಾಜೀವನಗರದಲ್ಲಿ ನೀರಿನ ಸಮಸ್ಯೆ ಉಲ್ಭಣಿಸಿದೆ. ಹನಿ ಹನಿ ನೀರಿಗೂ ಹಾಹಾಕಾರ ಪಡುವ ಸ್ಥಿತಿ ಬಂದೋದಗಿದೆ.
ಎರಡು ಓವರ್ ಹೆಡ್ ಟ್ಯಾಂಕ್ ಇದ್ದರೂ ನೀರಿಗೆ ಬರ:
ರಾಜೀವನಗರದಲ್ಲಿ ಅಪಾರ ಪ್ರಮಾಣದಲ್ಲಿ ನೀರು ಇದೆ. ನೀರಿನ ಮೂಲಕ್ಕೆ ಯಾವುದೇ ಸಮಸ್ಯೆ ಇಲ್ಲ. ಎರಡು ಓವರ್ ಹೆಡ್ ಟ್ಯಾಂಕ್ ಕೂಡ ಇದೆ. ಆದರೆ ನಿರ್ವಹಣೆಯ ಸಮಸ್ಯೆಯಿಂದ ಗ್ರಾಮಸ್ಥರು ಹನಿ ನೀರಿಗೂ ಪರಿತಪಿಸುವಂತಾಗಿದೆ.
ಪಂಚಾಯತ್ ಸದಸ್ಯ ಶಾಂತರಾಮ್ ಶೆಟ್ಟಿಯಿಂದ ಉಢಾಪೆಯ ಉತ್ತರ:
ನೀರಿನ ಸಮಸ್ಯೆ ಕುರಿತು ಪಂಚಾಯತ್ ಸದಸ್ಯ ಶಾಂತರಾಮ್ ಶೆಟ್ಟಿ ಅವರಿಗೆ ನಿವಾಸಿಗಳು ಕರೆ ಮಾಡಿದರೆ ಉಡಾಫೆ ಉತ್ತರ ನೀಡಿದ್ದಾರೆ. ನೀವು ಸಭೆಯಲ್ಲಿ ಮಾತನಾಡಿ, ನೀರು ಬಿಡುವವನಿಗೆ ಕರೆ ಮಾಡಿ ಎಂದು ಹರಾಕೆಯ ಉತ್ತರ ನೀಡಿದ್ದಾರೆ. ನೀರಿನ ಸಮಸ್ಯೆ ಬಗೆಹರಿಸುವ ಕುರಿತು ಯಾವುದೇ ಉತ್ತರ ಅವರಿಂದ ಬಂದಿಲ್ಲ.












