ರಂಗಭೂಮಿ ಬದುಕನ್ನು ಕಲಿಸುತ್ತದೆ – ಎಸ್ ರಾಮನಾಥ

ರಂಗಭೂಮಿಯ ಕೋರ್ಸ್ ಗಳ ಮೂಲಕ ನಾಯಕರನ್ನು ಕಟ್ಟುವುದು ಅಥವಾ ಅಭಿನಯಿಸುವುದಕ್ಕಿಂತಲೂ ಮಿಗಿಲಾಗಿ ಅದು ಬದುಕಲು ಕಲಿಸುತ್ತದೆ ಎಂದು ಮೈಸೂರು ರಂಗಾಯಣದ ಪ್ರಿನ್ಸಿಪಾಲ್ ಎಸ್ ರಾಮನಾಥ ಹೇಳಿದರು. ಅವರು ಅರೆಹೊಳೆ ಪ್ರತಿಷ್ಠಾನವು ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯ, ಕಲಾಭಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ನಾಂದಿ ನಾಟಕೋತ್ಸವದಲ್ಲಿ ಮಾತಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಹೆಚ್ಚೆಚ್ಚು ಯುವ ಜನತೆ ರಂಗಶಿಕ್ಷಣದಲ್ಲಿ ತೊಡಗಿಕೊಳ್ಳಬೇಕೆಂದು ಅವರು ಕರೆ ನೀಡಿದರು. ಇದೇ 31 ರಂದು ಸೇವಾ ನಿವೃತ್ತಿ ಹೊಂದಲಿರುವ ಹಿನ್ನೆಲೆಯಲ್ಲಿ ಅವರನ್ನು ಮಂಗಳೂರು ರಂಗಾಸಕ್ತರ ಪರವಾಗಿ ಅಭಿನಂದಿಸಲಾಯಿತು. ಅರೆಹೊಳೆ ಪ್ರತಿಷ್ಠಾನದ ಅಧ್ಯಕ್ಷ ಅರೆಹೊಳೆ ಸದಾಶಿವ ರಾವ್, ಜಾದೂಗಾರ ಕುದ್ರೋಳಿ ಗಣೇಶ್, ಸಂತ ಅಲೋಶಿಯಸ್ ಕಾಲೇಜಿನ ಕ್ರಿಸ್ಟೋಫರ್ ನೀನಾಸಂ, ಡಾ. ದಿನೇಶ್ ನಾಯ್ಕ್, ನಂದಗೋಕುಲ ನಿರ್ದೇಶಕಿ ಶ್ವೇತಾ ಅರೆಹೊಳೆ, ಕಲಾಭಿಯ ಉಜ್ವಲ್ ಯು ವಿ, ರಂಗಾಯಣದ ಶಿಕ್ಷಕ ಅಮಿತ್ ರೆಡ್ಡಿ ಉಪಸ್ಥಿತರಿದ್ದರು. ನಂತರ ರಂಗಾಯಣ ವಿದ್ಯಾರ್ಥಿಗಳಿಂದ ಕೀರ್ತಿನಾಥ ಕುರ್ತುಕೋಟಿ ರಚನೆಯ ನಾಟಕ ಆ ಮನಿ ಪ್ರದರ್ಶನಗೊಂಡಿತು. ನಾಟಕವನ್ನು ಮಂಜುನಾಥ ಬಡಿಗೇರ ನಿರ್ದೇಶಿಸಿದ್ದರು