ಯುಗಾದಿ ಹಬ್ಬದಲ್ಲಿದೆ ಹೊಸತನ, ಬೇವು ಬೆಲ್ಲದ ಚೇತನ.

ಚೈತ್ರ ಕಳೆದು ವಸಂತದ ಮಧುರ ಪರಿಮಳದ ಮೊದಲ ಹಬ್ಬವೇ ಯುಗಾದಿ ಎಲ್ಲೆಲ್ಲೂ ಹಬ್ಬದ ವಾತಾವರಣ ಹೊಸ ವರ್ಷದ ನಿಜವಾದ ಕ್ಯಾಲೆಂಡರ್ ಬದಲಿಸೋ ಕಾಲ. ಬ್ರಹ್ಮದೇವನು ಬ್ರಹ್ಮಾಂಡದ ಹೊಸ ಯುಗವನ್ನು ಪ್ರಾರಂಭಿಸಿದ್ದು ಕೂಡ ಇದೇ ದಿನ ನೋಡಿ ಹಬ್ಬದ ಆರಂಭಕ್ಕೂ ಮೊದಲೇ ಮನೆಯನ್ನು ಸ್ವಚ್ಛ ಮಾಡಿ ಬಾಗಿಲಿಗೆ ಮಾವಿನ ತೋರಣ ಬಾಗಿಲ ಮುಂದೆ ರಂಗೋಲಿ ಆ ರಂಗೋಲಿ ಮಧ್ಯದಲ್ಲಿ ಹೂವು ಆಹಾ! ನೋಡಲು ಕಣ್ಣಿಗೆ ತಂಪು ಮನಸ್ಸಿಗೆ ಇಂಪು.

ಹಾಗೆ ಯುಗಾದಿಯ ಬೆಳಗ್ಗೆ ಬಿಸಿ ಬಿಸಿ ಎಣ್ಣೆ ಅಭ್ಯಂಜನ ಹೊಸ ಬಟ್ಟೆ ಅಡುಗೆ ಮನೆ ಅಡುಗೆ ಪರಿಮಳ ಮೂಗನ್ನು ಬಡಿದೆಬ್ಬಿಸುತ್ತದೆ, ಮನೆ ಮಂದಿ ಎಲ್ಲ ಸೇರಿ ಮನೆದೇವರ ಪೂಜೆ ಮಾಡಿ ಹಬ್ಬದ ದಿನ ಬೆಲ್ಲವಷ್ಟೇ ತಿನ್ನಬೇಕೆಂದು ಆಸೆ ಪಡುವ ನಮಗೆ ಬೇವಿನ ಮಹತ್ವದ ಅರಿವಿಲ್ಲ ಶತಾಯುರ್ವಜ್ರದೇಹಾಯ ಸರ್ವಸಂಪತ್ಕರಾಯ ಚಸರ್ವಾರಿಷ್ಟ ವಿನಾಶಾಯ ನಿಂಬಕಂ ದಲಭಕ್ಷಣಮ್ ಅಂದರೆ ವಜ್ರದಂತೆ ಗಟ್ಟಿಯಾದ ದೇಹ ಸಕಲ ಸಂಪತ್ತು ರೋಗರು ಜನಗಳ ನಿವಾರಣೆ ಇವೆಲ್ಲವೂ ಬೇವು ತಿನ್ನುವುದರಿಂದ ಸಾಧ್ಯ ಎಂದು ಹೇಳೋದು ಅಜ್ಜಿಯ ಹಬ್ಬದ ಪಾಠ. ಒಟ್ಟಿನಲ್ಲಿ ಕಷ್ಟ ಸುಖವನ್ನು ಅರಿತು ಆಚರಿಸುವ ಬೇವುಬೆಲ್ಲದ ಹಬ್ಬ ಜೀವನದ ಹೊಸತನವನ್ನು ಸ್ವೀಕರಿಸಲು ಜನರಿಗೆ ಉತ್ತೇಜಿಸುತ್ತದೆ.

-ರಕ್ಷಿತಾ ಪತ್ರಿಕೋದ್ಯಮ ವಿದ್ಯಾರ್ಥಿನಿ, ಭಂಡಾರ್ಕಾರ್ಸ್ ಕಾಲೇಜು, ಕುಂದಾಪುರ