ಮಂಗಳೂರು: ಯಕ್ಷಾಭಿನಯ ಬಳಗ ಮಂಗಳೂರು (ರಿ) ಇದರ ವಾರ್ಷಿಕ ಮಹಾಸಭೆ ದಕ್ಷಿಣ ಕನ್ನಡ ಜಿಲ್ಲಾ ಹಿರಿಯ ಪ್ರಾಥಮಿಕ ಶಾಲೆ ಕಾಪಿಕಾಡು, ಮಂಗಳೂರು ಇಲ್ಲಿ ನಡೆಯಿತು.
ಮಾಸ್ಟರ್ ಆತ್ರೇಯ ಅವರು ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಿದರು ಸಂಘದ ಸದಸ್ಯರಾದ ಉತ್ಸವಕುಮಾರ್ ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ಸಂತೋಷ ಕುಮಾರ್ ವಾರ್ಷಿಕ ವರದಿ ಮಂಡಿಸಿದರು. ಸಂಘದ ಕೋಶಾಧಿಕಾರಿ ಶ್ರೀ ರಾಘವೇಂದ್ರ ನೆಲ್ಲಿಕಟ್ಟೆ ಲೆಕ್ಕಪತ್ರ ಮಂಡಿಸಿದರು.
ಸಂಘದ ಅಧ್ಯಕ್ಷ ಬಿ. ಪ್ರಶಾಂತ್ ಕುಮಾರ್ ಶೆಟ್ಟಿ ಮಾತನಾಡಿ ಕಳೆದ ನಾಲ್ಕು ವರ್ಷದಿಂದ ಮಂಗಳೂರಿನಲ್ಲಿ ಬಡಗುತಿಟ್ಟು ಯಕ್ಷಗಾನ ನೃತ್ಯ ತರಬೇತಿ ಹಾಗೂ ಪ್ರದರ್ಶನ ಮಾಡುತ್ತಾ ಬಂದಿದ್ದು ಮುಂದಿನ ವರ್ಷವೂ ಬಡಗುತಿಟ್ಟನ ಯಕ್ಷಗಾನದ ಬಣ್ಣಗಾರಿಕೆ ಮತ್ತು ನೃತ್ಯ ಪ್ರಾತ್ಯಕ್ಷಿಕೆ ಮತ್ತು ಪ್ರದರ್ಶನದ ಗುರಿ ಇರಿಸಿಕೊಂಡಿದೆ. ಮಂಗಳೂರಿನ ಸುತ್ತಮುತ್ತಲು ಪರಿಸರದ ಬಡಗುತಿಟ್ಟಿನ ಯಕ್ಷಗಾನ ಆಸಕ್ತರನ್ನು ಒಟ್ಟುಗೂಡಿಸಿಕೊಂಡು ಸದಸ್ಯರನ್ನು ಹೆಚ್ಚು ಮಾಡಿಕೊಂಡು ಮುಂದಿನ ಚಟುವಟಿಕೆಗಳನ್ನು ಮಾಡೋಣ. ಎಲ್ಲರೂ ಸಹಕರಿಸಬೇಕು ಎಂಬುದಾಗಿ ಕೇಳಿಕೊಂಡರು.
2024 25ರ ಅವಧಿಗೆ ಅಧ್ಯಕ್ಷರಾಗಿ ಬಿ ಪ್ರಶಾಂತ್ ಕುಮಾರ್ ಶೆಟ್ಟಿ ಕಾರ್ಯದರ್ಶಿಯಾಗಿ ಸಂತೋಷ್ ಕುಮಾರ್ ಮತ್ತು ಕೋಶಾಧಿಕಾರಿಯಾಗಿ ರಾಘವೇಂದ್ರ ನೆಲ್ಲಿಕಟ್ಟೆಯವರು ಮರು ಆಯ್ಕೆಗೊಂಡರು. ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಶ್ರೀ ದೇವು ಹನೆಹಳ್ಳಿ, ಶ್ರೀ ಮಂಜುನಾಥ ಶ್ರೀ ರಾಮಕೃಷ್ಣ ಮರಾಟಿ, ಶ್ರೀಮತಿ ಭಾಗ್ಯಪ್ರಕಾಶ್ ಉಡುಪ ಹಾಗೂ ಶ್ರೀ ಉತ್ಸವಕುಮಾರ್ ಆಯ್ಕೆಗೊಂಡರು ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.
ಸಂಘದ ಸದಸ್ಯರಾದ ಶ್ರೀಮತಿ ಗಾಯತ್ರಿ ಶ್ರೀನಿವಾಸ್ ಧನ್ಯವಾದ ಸಮರ್ಪಿಸಿದರು ಶ್ರೀ ರಾಮಕೃಷ್ಣ ಮರಾಟಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.