ಮೈತ್ರಿ ಅಭ್ಯರ್ಥಿಗಳ ಪರ ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಮತಯಾಚನೆ.

ಬೈಂದೂರು: ನೈರುತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣಾ ಅಭ್ಯರ್ಥಿಗಳಾದ ಡಾ. ಧನಂಜಯ ಸರ್ಜಿ ಹಾಗೂ ಎಸ್. ಎಲ್. ಭೋಜೆಗೌಡ ಅವರ ಪರವಾಗಿ ಬೈಂದೂರು ವಿಧಾನಸಭಾ ಕ್ಷೇತ್ರದ ಶಂಕರನಾರಾಯಣ, ಉಳ್ಳೂರು-74 , ಸಿದ್ದಾಪುರ, ಹೊಸಂಗಡಿ, ಆಜ್ರಿ, ಕಾವ್ರಾಡಿ, ಗುಲ್ವಾಡಿ, ಕರ್ಕುಂಜೆ, ಹಟ್ಟಿಯಂಗಡಿ, ತಲ್ಲೂರು ಗ್ರಾಮ ಪಂಚಾಯಿತಿಗಳಿಗೆ ಶಾಸಕರಾದ ಗುರುರಾಜ ಗಂಟಿಹೊಳೆ, ಬೈಂದೂರು ಮಂಡಲದ ಪ್ರಧಾನ ಕಾರ್ಯದರ್ಶಿಯಾದ ಉಮೇಶ ಶೆಟ್ಟಿ ಹಾಗೂ ಮಂಡಲದ ಅನೇಕ ಪದಾಧಿಕಾರಿಗಳನ್ನು ಭೇಟಿ ಮಾಡಿ ಆಯಾ ಗ್ರಾಮ ವ್ಯಾಪ್ತಿಯ ಪ್ರಮುಖರ ಜೊತೆ ಚುನಾವಣಾ ತಯಾರಿ ಬಗ್ಗೆ ಚರ್ಚಿಸಲಾಯಿತು.