ಮೇ 7: ಉಡುಪಿ ತಾಲೂಕು ಕ ಸಾ ಪ ದಿಂದ ಸಂಸ್ಥಾಪನ ದಿನಾಚರಣೆ ಹಾಗೂ ದತ್ತಿ ಉಪನ್ಯಾಸ

ಉಡುಪಿ: ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ
ತಾಲೂಕು ಘಟಕ ಹಾಗೂ ಉಪೇಂದ್ರ ಪೈ ಮೆಮೋರಿಯಲ್ ಕಾಲೇಜು ಉಡುಪಿ ಇವರ ಸಹಕಾರದಲ್ಲಿ
೧೧೦ನೇ ಸಂಸ್ಥಾಪನಾ ದಿನಾಚರಣೆ ಹಾಗೂ ದತ್ತಿ ಉಪನ್ಯಾಸ ಕಾರ್ಯಕ್ರಮವು ಮೇ 7 ಮಂಗಳವಾರ ಬೆಳಗ್ಗೆ 10 ಗಂಟೆಗೆ ಸರಿಯಾಗಿ ಉಡುಪಿಯ ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ನಡೆಯಲಿದೆ.

ಡಾ. ಕೋಟ ಶಿವರಾಮ ಕಾರಂತ ದತ್ತಿ ಉಪನ್ಯಾಸ ‘ಕಾರಂತರ ಸಾಹಿತ್ಯ ಚಿಂತನ’ ಈ ವಿಷಯದ ಕುರಿತು ಸಾಹಿತಿ ಡಾ. ನಿಕೇತನ ಅವರು ಮಾತನಾಡಲಿದ್ದಾರೆ.
ಡಾ. ಕಿದಿಯೂರು ಗುರುರಾಜ ಭಾಗವತ್ ಮತ್ತು ಶಾಂತ ಜಿ ಭಾಗವತ್ ದತ್ತಿ ಉಪನ್ಯಾಸ ‘ಜೀವನಕ್ಕಾಗಿ ಆಯುರ್ವೇದ ‘
ಈ ವಿಷಯದ ಕುರಿತು ಉಡುಪಿ ಜಿಲ್ಲಾ ಆಯುಷ್ ಕೇಂದ್ರದ ವೈದ್ಯರಾಗಿರುವ ಡಾ. ಸ್ವಾತಿ ಶೇಟ್ ನಡೆಸಿಕೊಡುತ್ತಾರೆ ಎಂದು ಉಡುಪಿ ತಾಲೂಕು ಕಸಾಪ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತದೆ.