ಮುಲ್ಕಿ: ಯುವಕ ನೀರುಪಾಲು

ಮೂಲ್ಕಿ: ಕೊಳಚಿಕಂಬಳ ಬಳಿ ಮರುವಾಯಿ ಹೆಕ್ಕಲು ನದಿಗಿಳಿದ ಯುವಕನೊಬ್ಬ ನೀರುಪಾಲಾಗಿರುವ ಘಟನೆ ನಡೆದಿದೆ. ನಾಪತ್ತೆಯಾದ ಯುವಕನನ್ನು ಬಜಪೆಯ ಅದ್ಯಪಾಡಿಯ ಹಳೆ ವಿಮಾನ ನಿಲ್ದಾಣ ಬಳಿಯ ನಿವಾಸಿ ಅಭಿಲಾಷ್(24) ಎಂದು ಗುರುತಿಸಲಾಗಿದೆ.

ಸುಮಾರು 10 ಯುವಕರ ತಂಡ ಬಜಪೆಯ ಅದ್ಯಪಾಡಿಯಿಂದ ಮರುವಾಯಿ ಹೆಕ್ಕಲು ಆಗಮಿಸಿದ್ದು, ಅದರಲ್ಲಿ ನಾಲ್ವರು ಮರುವಾಯಿ ಹೆಕ್ಕುವುದಕ್ಕಾಗಿ ಸಸಿಹಿತ್ಲು ಮುಂಡಾ ಬೀಚ್‌ ಬಳಿಯ ಅಳಿವೆಯ ಬಳಿ ನದಿಗೆ ಇಳಿದಿದ್ದರು. ಉಳಿದ ಆರು ಮಂದಿ ದಡದಲ್ಲಿಯೇ ಇದ್ದರು, ನೀರಿಗೆ ಇಳಿದವರಲ್ಲಿ ಈಜು ಬಾರದ ಕಾರಣ ಕೆಲವು ಯುವಕರು ನೀರಿನಲ್ಲಿ ಮುಳುಗಡೆಯಾಗುವ ಹಂತಕ್ಕೆ ಹೋಗಿದ್ದರು. ಈ ವೇಳೆ ಅಭಿಲಾಷ್‌ (24) ಉಳಿದವರನ್ನು ಬದುಕಿಸಲು ಹೋಗಿ ತಾನು ಜೀವ ಕಳೆದುಕೊಂಡಿದ್ದಾರೆ. ಯುವಕರ ಬೊಬ್ಬೆ ಕೇಳಿ ಧಾವಿಸಿ ಬಂದ ಮೀನುಗಾರರು ಮೂವರನ್ನು ರಕ್ಷಿಸಿದ್ದಾರೆ. ನೀರುಪಾಲಾಗಿರುವ ಅಭಿಲಾಷ್‌ ಪತ್ತೆಯಾಗಿಲ್ಲ.