ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ ಟಾಟಾನ್ಯಾನೋ ಎಲೆಕ್ಟ್ರಿಕ್ ಕಾರು

ಮುಂಬೈ: ರತನ್ ಟಾಟಾರ ಎಲೆಕ್ಟಿಕ್ ನ್ಯಾನೋ ಕನಸು ಮುಂದಿನ ವರ್ಷ ನನಸಾಗಲಿದೆ. ಬೇಡಿಕೆ ಕುಸಿತದ ಕಾರಣ ಉತ್ಪಾದನೆ ಸ್ಥಗಿತಗೊಂಡಿದ್ದ ನ್ಯಾನೋ ಕಾರನ್ನು ಎಲೆಕ್ಟ್ರಿಕ್ ಮಾದರಿಯಲ್ಲಿ 2025ರ ವೇಳೆಗೆ ಬಿಡುಗಡೆ ಮಾಡಲು ಟಾಟಾ ಸಮೂಹ ಸಜ್ಜಾಗಿದೆ.

ಕಾರು 17 ಕಿಲೋವ್ಯಾಟ್ ಬ್ಯಾಟರಿ ಹೊಂದಿರಲಿದ್ದು, ಪೂರ್ತಿ ಚಾರ್ಜ್ ಮಾಡಿದರೆ 400 ಕಿ.ಮೀ. ಸಾಗಬಲ್ಲದು, ಕಾರಿನ ಒಳಭಾಗದಲ್ಲಿ 9 ಇಂಚು ಟಚ್ ಸ್ಟೀನ್ ಟೀವಿ, ಪವರ್ ಕಿಟಕಿ, ಸ್ವಯಂಚಾಲಿತ ಹವಾಮಾನ ನಿಯಂತ್ರಕ ಸೇರಿ ಅತ್ಯಾಧುನಿಕ ಇಂಟೀರಿಯ ‌ಇರಲಿದೆ. ಕಾರನ್ನು 4 ಲಕ್ಷ ರೂ.ಗೆ ಮಾರುಕಟ್ಟೆಗೆ ಬಿಡುಗಡೆ ಮಾಡುವ ಬಗ್ಗೆ ಕಂಪನಿ ಚಿಂತನೆ ನಡೆಸಿದೆ.