ಮಹಿಳಾ ಶಕ್ತಿಯೊಂದಿಗೆ ಜಗಜಗ ಮಿಂಚಿತು ಉಡುಪಿಯ ಪವರ್ ಫುಲ್ “ಪವರ್ ಪರ್ಬ!

ಉಡುಪಿ: ಮಹಿಳಾ ಉದ್ಯಮಿಗಳ ಪವರ್ ಸಂಸ್ಥೆ (ಫ್ಲ್ಯಾಟ್‌ಫಾರಂ ಆಫ್ ವುಮನ್ ಎಂಟರ್‌ಪ್ರೆನ್ಯೂರ್) ಆಶ್ರಯದಲ್ಲಿ ಮಿಷನ್ ಕಂಪೌಂಡ್ ಬಳಿಯ ಕ್ರಿಶ್ಚಿಯನ್ ಹೈಸ್ಕೂಲ್, ಮೈದಾನದಲ್ಲಿ ನಡೆಯುತ್ತಿರುವ ‘ಪವರ್’ ಪರ್ಬ-2025’ರಲ್ಲಿ ಶನಿವಾರ ಸಂಜೆ ಸಭಾ ಕಾರ್ಯಕ್ರಮ ,ಸಾಂಸ್ಕೃತಿಕ ಹಾಗು ಪವರ್ ಸಂಸ್ಥೆ ಸದಸ್ಯರಿಂದ ಫ್ಯಾಷನ್ ಶೋ ಕಾರ್ಯಕ್ರಮ ನಡೆಯಿತು .

ಮಹಿಳೆಯರಿಂದ, ಮಹಿಳೆಯರಿಗಾಗಿ, ಮಹಿಳಿಯರಿಗೋಸ್ಕರ ನಡೆಯುತ್ತಿರುವ ಪವರ್ ಪರ್ಬದಲ್ಲಿ ಕಳೆದೆರಡು ದಿನಗಳಿಂದ ಮಹಿಳಾ ಶಕ್ತಿಯ ಅನಾವರಣವಾಗುತ್ತಿದ್ದು, 150ಕ್ಕೂ ಹೆಚ್ಚು ಮಳಿಗೆಗಳು, ತರಹೇವಾರಿ ಖಾದ್ಯ ಉತ್ಪನ್ನಗಳು, ಆಟದ ವಿಭಾಗಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಸಾರ್ವಜನಿಕರನ್ನು ರಂಜಿಸುತ್ತಲಿವೆ.

ಇಂದು ಪವರ್ ಪರ್ಬದ ಕೊನೆಯ ದಿನವಾಗಿದ್ದು, ಸಂಜೆ 4.30ಕ್ಕೆ ಸಮಾರೋಪ ಸಮಾರಂಭ ,ಮಹಿಳಾ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಬಳಿಕ ಮಂಜೀತ್ ಮತ್ತು ತಂಡದವರಿಂದ ಸಮೂಹ ನೃತ್ಯ ಕಾರ್ಯಕ್ರಮ ನಡೆಯಲಿದೆ.