ಮಲ್ಪೆ: ವ್ಯಕ್ತಿ ಮೂರ್ಛೆರೋಗದಿಂದ ಮೃತ್ಯು.

ಮಲ್ಪೆ: ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ಮೀನುಗಾರಿಕಾ ಕೆಲಸವನ್ನು ಮಾಡುತ್ತಿದ್ದ ದಾವಣಗೆರೆ ಚೆನ್ನಗಿರಿಯ ಹನುಮಂತ (56) ಅವರಿಗೆ ಮೇ 25ರಂದು ಮೂರ್ಛೆ ರೋಗ ಬಂದು ಸಾವನ್ನಪ್ಪಿದ್ದಾರೆ.

ಅವರು ಕಳೆದ 20 ವರ್ಷದಿಂದ ಮಲ್ಪೆ ಬಂದರಿನಲ್ಲಿ ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದರು. ಅವರಿಗೆ ವಿಪರೀತ ಮಧ್ಯಪಾನ ಮಾಡುವ ಚಟವಿತ್ತು. ಈ ಕುರಿತು ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.