ಮಲ್ಪೆ ರಾಮ ಮಂದಿರಕ್ಕೆ ಕಾಶೀ ಮಠಾಧೀಶರ ಭೇಟಿ: ” ಶ್ರೀ ಸುಧೀಂದ್ರ ತೀರ್ಥ ನಿಲಯ ” ಇದರ ಉದ್ಘಾಟನಾ ಕಾರ್ಯಕ್ರಮ

ಮಲ್ಪೆ: ಶ್ರೀ ರಾಮ ಮಂದಿರ ಜಿ ಎಸ್ ಬಿ ಸಮಾಜ ಮಲ್ಪೆ ಇದರ ರಜತ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಒಂದಾದ ಅತಿಥಿ ಗ್ರಹ ” ಶ್ರೀ ಸುಧೀಂದ್ರ ತೀರ್ಥ ನಿಲಯ ” ಇದರ ಉದ್ಘಾಟನೆ ಕಾರ್ಯಕ್ರಮವು ಜನವರಿ 20 ರಂದು ಸಂಜೆ ಶ್ರೀ ಕಾಶಿ ಮಠ ಸಂಸ್ಥಾನದ ಮಠಾಧಿಪತಿ ಶ್ರೀಮದ್ ಸಂಯಮೀಂದ್ರ ತೀರ್ಥ ಶ್ರೀಪಾದಂಗಳವರ ಅಮೃತ ಹಸ್ತದಿಂದ ಉದ್ಘಾಟನೆಗೊಂಡಿತು.

ದೇವಳದ ವತಿಯಿಂದ ಪೂಜ್ಯ ಶ್ರೀಗಳನ್ನು ಚಂಡೆ , ಮಂಗಳವಾದ್ಯ ಹಾಗೂ ಪೂರ್ಣ ಕುಂಭ ದಿಂದ ಸ್ವಾಗತಿಸಿ ಬರಮಾಡಿಕೊಂಡು ಪಾದ ಪೂಜೆ ಮಾಡಿ ಫಲ ಪುಷ್ಪ ಕಾಣಿಕೆ ನೀಡಿ ಗೌರವಿಸಲಾಯಿತು , ಸ್ವಾಮೀಜಿಯವರು ಶ್ರೀ ರಾಮ ದೇವರಿಗೆ ಅಲಂಕಾರ ನೆರವೇರಿಸಿ ಮಹಾ ಪೂಜೆ ನೆರವೇರಿಸಿದರು.

ತಮ್ಮ ಅನುಗ್ರಹ ಸಂದೇಶದಲ್ಲಿ ಉಡುಪಿ – ಮಲ್ಪೆಗೆ ವಿಶೇಷ ನಂಟು ಹೊಂದಿದೆ. ಮಧ್ವಾಚಾರ್ಯರು ಮಲ್ಪೆಯಲ್ಲಿ ಬಲರಾಮ್ ದೇವರನ್ನು ಉಡುಪಿಯಲ್ಲಿ ಶ್ರೀಕೃಷ್ಣ ನನ್ನು ಪ್ರತಿಷ್ಠಾಪಿಸಿದರು. ದೇವಾಲಯಗಳ ನಿರ್ಮಾಣದಿಂದ ಊರಿನ ಅಭಿವೃದ್ದಿ ಜೊತೆ ಸಮಾಜವು ಅಭಿವೃದ್ಧಿ ಹೊಂದಿದೆ. ನಮ್ಮ ಪೂಜ್ಯ ಗುರುಗಳ ಜನ್ಮ ಶತಾಭ್ಡ್ಡಿ ಆಚರಣೆಯ ಸವಿ ನೆನಪಿಗಾಗಿ ಶ್ರೀ ಸುಧೀಂದ್ರ ತೀರ್ಥ ನಿಲಯ ಆತಿಥಿ ಗ್ರಹ ನಿರ್ಮಾಣ ಮಾಡಿದ್ದೂ ಸಂತಸ ತಂದಿದೆ. ಗುರುವಿನ ವಿಶೇಷ ಅನುಗ್ರಹ ನಿಮ್ಮಲ್ಲರ ಮೇಲೆ ಇರಲಿ ಎಂದು ಶುಭ ಹಾರೈಸಿದರು.

ಸಮಾರಂಭದಲ್ಲಿ ವೇದ ಮೂರ್ತಿ ಶ್ರೀಕಾಂತ್ ಭಟ್ , ವೇದ ಮೂರ್ತಿ ಚೇಂಪಿ ರಾಮಚಂದ್ರ ಭಟ್ , ಜಯದೇವ್ ಭಟ್ , ಗಣಪತಿ ಭಟ್ , ಮಂದಿರದ ಅರ್ಚಕರಾದ ಶೈಲೇಶ್ ಭಟ್ , ಜಗನನಾಥ್ ಕಾಮತ್ , ಶಿರಿಯಾರ ಗಣೇಶ್ ನಾಯಕ್ , ರಾಮ ಮಂದಿರದ ಅಧ್ಯಕ್ಷರಾದ ಗೋಕುಲ್ ದಾಸ್ ಪೈ , ರಾಮಾಂಜನೇಯ ಸೇವಾ ಟ್ರಸ್ಟಿನ ಉಪಾಧ್ಯಕ್ಷರಾದ ವಿಶ್ವನಾಥ್ ಭಟ್ , ಜಿ ಎಸ್ ಬಿ ಮಹಿಳಾ ಮಂಡಳಿ ಅಧ್ಯಕ್ಷರಾದ ಶಾಲಿನಿ ಪೈ, ಸುದೀರ್ ಶೆಣೈ , ಅನಿಲ್ ಕಾಮತ್ , ಜಿ ಎಸ್ ಬಿ ಮಹಿಳಾ ಮಂಡಳಿ ಸದಸ್ಯರು , ಯುವಕ ಮಂಡಳಿಯ ಸದಸ್ಯರು ನೂರಾರು ಸಮಾಜಭಾಂದವರು ಉಪಸ್ಥಿತರಿದ್ದರು.