ಮಲ್ಪೆ: ಮಹಿಳೆ ನಾಪತ್ತೆ.

ಮಲ್ಪೆ: ಹುಲ್ಲು ತರುವುದಾಗಿ ಹೇಳಿ ಹೋದ ಮಹಿಳೆ ವಾಪಸು ಮನೆಗೆ ಬಾರದೆ ನಾಪತ್ತೆಯಾಗಿರುವ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಡವೂರು ಗ್ರಾಮದ ಬೇಬಿ (71) ಅವರು ನಾಪತ್ತೆಯಾಗಿದ್ದು, ಸೆ.29ರಂದು ಸಂಜೆ ಹುಲ್ಲು ತರಲೆಂದು ಹೋಗಿದ್ದರು. ಅವರಿಗೆ ಹೃದಯ ಸಂಬಂಧಿ, ಮಧುಮೇಹ ಖಾಯಿಲೆ ಇತ್ತು ಎನ್ನಲಾಗಿದೆ.
ಸಂಬಂಧಪಟ್ಟವರಲ್ಲಿ ವಿಚಾರಿಸಲಾದರೂ, ಅವರು ಪತ್ತೆಯಾಗಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.