ಮಲ್ಪೆ ಫುಡ್ ಫೆಸ್ಟ್ ಗೆ ಅದ್ದೂರಿ ತೆರೆ, ಕಣ್ಮನ ಸೆಳೆದ ಆಕಾಶ ದೀಪಗಳು, ನಾಲಗೆಗೆ ರುಚಿ ಹತ್ತಿಸಿದ ಬಗೆ ಬಗೆ ಖಾದ್ಯಗಳು

ಉಡುಪಿ: ಮಲ್ಪೆ ಕಡಲ ಕಿನಾರೆಯಲ್ಲಿ ಪರಶುರಾಮ ಫ್ರೆಂಡ್ಸ್ ಬಳಗವು ಜನವರಿ 11- ಜ.14 ವರೆಗೆ ಆಯೋಜಿಸಿದ್ದ  ಮಲ್ಪೆ ಫುಡ್ ಫೆಸ್ಟ್ ಆಹಾರ ಮೇಳ ಯಶಸ್ವಿಯಾಗಿದ್ದು ಮೇಳದಲ್ಲಿದ್ದ ವಿವಿಧ ಖಾಧ್ಯಗಳ ರುಚಿಗೆ  ಜನರು ಮಾರು ಹೋಗಿದ್ದಾರೆ, ಅಲ್ಲದೇ ಆಕಾಶದಲ್ಲಿ ಆಕಾಶ ದೀಪಗಳನ್ನು ಹಾರಿಸುವ ವಿಭಿನ್ನ ಕಾರ್ಯಕ್ರಮಕ್ಕೆ ಜನರು ಫುಲ್ ಫೀಧಾಗೊಂಡಿದ್ದಾರೆ.

Oplus_131072

ಈ ಆಹಾರೋತ್ಸವದಲ್ಲಿ ಬಾಯಲ್ಲಿ ನೀರೂರಿಸುವ ವೈವಿಧ್ಯಮಯ ಖಾದ್ಯಗಳು ಜನರನ್ನು ಆಕರ್ಷಿಸಿದೆ. ಕಳೆದ ಮೂರು ದಿನಗಳಲ್ಲಿ ಸಹಸ್ತ್ರಾರು ಮಂದಿ ಪ್ರವಾಸಿಗರು ಮಲ್ಪೆ ಫುಡ್ ಫೆಸ್ಟ್ ನಲ್ಲಿ ಪಾಲ್ಗೊಂಡಿದ್ದರು. ಅತ್ಯಂತ ಅದ್ದೂರಿಯಾಗಿ ಈ‌ ಆಹಾರ ಮೇಳವನ್ನು ಆಯೋಜಿಸಲಾಗಿದೆ.

Oplus_131072

ಬಾಯಿ ರುಚಿ ಹತ್ತಿಸಿದ ಆಹಾರದ ಸ್ಟಾಲ್ಗಳು:
ಜನರನ್ನು ಮುಖ್ಯವಾಗಿ ಸೆಳೆದದ್ದು ಆಹಾರ ಮೇಳ. ಇಲ್ಲಿ ವಿವಿಧ ಬಗೆಯ ಮೀನಿನ ವಿವಿಧ ರೀತಿಯ ಫ್ರೈ ಚಿಕನ್ ತಂದೂರಿ, ಶೋರ್ಮ ಸಹಿತವಾಗಿ ಕೋಳಿಯ ವಿವಿಧ ಬಗೆಯ ಖಾದ್ಯಗಳು, ದೊಣ್ಣೆ ಬಿರಿಯಾನಿ, ಚಾಟ್ಸ್ ಡೋಮಿನೋಸ್, 99 ದೋಸೆ, ಚಿಕನ್ ತಂದೂರಿ, ಕರಕುಶಲ, ಕೈಮಗ್ಗದ ಉತ್ಪನ್ನ ಮೀನಿನ ಮಸಾಲ, ಉಪ್ಪಿನಕಾಯಿ, ಬೊಂಡ ಐಸ್‌ಕ್ರೀಮ್, ತಂಪು ಪಾನಿಯಗಳು, ಬಾಳೆ ಹಣ್ಣಿನ ಅವಿಲ್ ಮಿಲ್ಕ್ ಫ್ರೆಂಚ್ ಫ್ರೈಸ್, ಫ್ಯಾನ್ಸಿ ವಸ್ತು, ಕಲಾಕೃತಿಗಳು ಮೊದಲಾದ ಮಾರಾಟದ ಮಳಿಗೆಗಳು ಬೀಚ್‌ನಲ್ಲಿ ಗ್ರಾಹಕರನ್ನು ಆಕರ್ಷಿಸುತ್ತಿವೆ. ಸಹಸ್ರಾರು ಜನರ ನಾಲಗೆಗೆ ರುಚಿ ಹತ್ತಿಸಿದೆ.

Oplus_131072
Oplus_131072
Oplus_131072
Oplus_131072
Oplus_131072

ಆಕಾಶದಲ್ಲಿ ಹಾರಿದ ಆಕಾಶ ದೀಪಗಳು:

ರಂಗು ರಂಗಿನ ಬೆಳಕಿನಲ್ಲಿ ರಾತ್ರಿಯ ಆಕಾಶದಲ್ಲಿ ಆಕಾಶ ಬುಟ್ಟಿಗಳನ್ನು ಹಾರಿಸುವ, ನೂರಾರು ಆಕಾಶ ದೀಪಗಳು ಆಕಾಶದಲ್ಲಿ ಹಾರುವುದನ್ನು ಕಣ್ತುಂಬಿಕೊಳ್ಳುವ ಭಾಗ್ಯ ಜನತೆಗೆ ಸಿಕ್ಕಿದ್ದು ಕಾರ್ಯಕ್ರಮದ ವೈಶಿಷ್ಟ್ಯ. ಈ ದೃಶ್ಯವನ್ನು ನೋಡಲು ರಾಶಿ ರಾಶಿ ಜನರು ನೆರೆದಿದ್ದರು. ಇನ್ನುಳಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರನ್ನು ಬೇರೆಯೇ ಪ್ರಪಂಚಕ್ಕೆ ಕರೆದುಕೊಂಡು ಹೋದವು.ಅಂತೂ ಜನರಿಗೆ ಭರಪೂರ ಮನರಂಜನೆಯನ್ನು ನೀಡಿದ ಖ್ಯಾತಿ ಪರಶುರಾಮ ಫ್ರೆಂಡ್ಸ್ ಬಳಗಕ್ಕೆ ಸಲ್ಲಬೇಕು.

Oplus_131072
Oplus_131072