ಉಡುಪಿ: ಮಲ್ಪೆ ಕಡಲ ಕಿನಾರೆಯಲ್ಲಿ ಪರಶುರಾಮ ಫ್ರೆಂಡ್ಸ್ ಆಯೋಜಿಸಿದ ಮಲ್ಪೆ ಫುಡ್ ಫೆಸ್ಟ್ ಆಹಾರ ಮೇಳ ಜನವರಿ 11ರಂದು ಪ್ರಾರಂಭಗೊಂಡಿದ್ದು, ಇಂದು (ಜ.14) ಕೊನೆಯ ದಿನವಾಗಿದೆ.

ಈ ಆಹಾರೋತ್ಸವದಲ್ಲಿ ಬಾಯಲ್ಲಿ ನೀರೂರಿಸುವ ವೈವಿಧ್ಯಮಯ ಖಾದ್ಯಗಳು ಜನರನ್ನು ಆಕರ್ಷಿಸಿದೆ. ಕಳೆದ ಮೂರು ದಿನಗಳಲ್ಲಿ ಸಹಸ್ತ್ರಾರು ಮಂದಿ ಪ್ರವಾಸಿಗರು ಮಲ್ಪೆ ಫುಡ್ ಫೆಸ್ಟ್ ನಲ್ಲಿ ಪಾಲ್ಗೊಂಡಿದ್ದರು. ಅತ್ಯಂತ ಅದ್ದೂರಿಯಾಗಿ ಈ ಆಹಾರ ಮೇಳವನ್ನು ಆಯೋಜಿಸಲಾಗಿದೆ.

ಇಂದಿನ (14-01-2025) ಸಾಂಸ್ಕೃತಿಕ ಕಾರ್ಯಕ್ರಮ:
- ಸಂಜೆ ಗಂಟೆ 5 ರಿಂದ 7 ರವರೆಗೆ ‘ಲೈವ್ ಮ್ಯೂಸಿಕ್ ಸೆಷಲ್ ಟೀಮ್ ಖಾಬ್’.
- ಗಂಟೆ 7 ರಿಂದ 9ರ ವರೆಗೆ ‘ಚೆಂಡೆ ಮತ್ತು ವಯೊಲಿನ್ ಫ್ಯೂಷನ್ ಶೋ’.
- ರಾತ್ರಿ ಗಂಟೆ 9 ರಿಂದ 10ರ ವರೆಗೆ ‘ಕೌಶಿಕ್ ಸುವರ್ಣ ನೃತ್ಯ ತಂಡ ಅವರಿಂದ ಡ್ಯಾನ್ಸ್ ಶೋ’.
- ರಾತ್ರಿ 10 ರಿಂದ 11ರ ವರೆಗೆ ‘ಲ್ಯಾಂಟರ್ನ್ ಫೆಸ್ಟಿವಲ್ ಮತ್ತು ಸಿಡಿಮದ್ದು ಪ್ರದರ್ಶನ ನಡೆಯಲಿದ್ದು, ಸಾವಿರಕ್ಕೂ ಹೆಚ್ಚು ಲ್ಯಾಂಡನ್ಗಳನ್ನು ಆಕಾಶಕ್ಕೆ ಹಾರಿ ಬಿಡಲಾಗುವುದು.
ಇಲ್ಲಿದೆ 50ಕ್ಕೂ ಅಧಿಕ ವೈವಿಧ್ಯಮಯ ಆಹಾರದ ಸ್ಟಾಲ್‌ಗಳು:
ಆಹಾರ ಮೇಳದಲ್ಲಿ ವಿವಿಧ ಬಗೆಯ ಮೀನಿನ ವಿವಿಧ ರೀತಿಯ ಫ್ರೈ ಚಿಕನ್ ತಂದೂರಿ, ಶೋರ್ಮ ಸಹಿತವಾಗಿ ಕೋಳಿಯ ವಿವಿಧ ಬಗೆಯ ಖಾದ್ಯಗಳು, ದೊಣ್ಣೆ ಬಿರಿಯಾನಿ, ಚಾಟ್ಸ್ ಡೋಮಿನೋಸ್, 99 ದೋಸೆ, ಚಿಕನ್ ತಂದೂರಿ, ಕರಕುಶಲ, ಕೈಮಗ್ಗದ ಉತ್ಪನ್ನ ಮೀನಿನ ಮಸಾಲ, ಉಪ್ಪಿನಕಾಯಿ, ಬೊಂಡ ಐಸ್‌ಕ್ರೀಮ್, ತಂಪು ಪಾನಿಯಗಳು, ಬಾಳೆ ಹಣ್ಣಿನ ಅವಿಲ್ ಮಿಲ್ಕ್ ಫ್ರೆಂಚ್ ಫ್ರೈಸ್, ಫ್ಯಾನ್ಸಿ ವಸ್ತು, ಕಲಾಕೃತಿಗಳು ಮೊದಲಾದ ಮಾರಾಟದ ಮಳಿಗೆಗಳು ಬೀಚ್‌ನಲ್ಲಿ ಗ್ರಾಹಕರನ್ನು ಆಕರ್ಷಿಸುತ್ತಿವೆ.
