ಮಲ್ಪೆ ಡೆಲ್ಟಾ ಬೀಚ್’ನಲ್ಲಿ ಸ್ವಚ್ಛತಾ ಅಭಿಯಾನ

ಉಡುಪಿ: MAHE MIT NSS ಘಟಕದ 50 ಸ್ವಯಂಸೇವಕರು NSS ಕಾರ್ಯಕ್ರಮ ಅಧಿಕಾರಿ ಡಾ.ಲಕ್ಷ್ಮಣ್ ರಾವ್ ಅವರೊಂದಿಗೆ ಮಲ್ಪೆ ಡೆಲ್ಟಾ ಪಾಯಿಂಟ್ ಬೀಚ್ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿದರು.

ಬೀಚ್ ನಲ್ಲಿದ್ದ 70ಕ್ಕೂ ಹೆಚ್ಚು ಚೀಲ ಪ್ಲಾಸ್ಟಿಕ್ ಹಾಗೂ ಇತರೆ ತ್ಯಾಜ್ಯವನ್ನು ತೆರವುಗೊಳಿಸಲಾಯಿತು. ಇದು ಸಮುದ್ರ ಮಾಲಿನ್ಯ ಮತ್ತು ಪ್ಲಾಸ್ಟಿಕ್ ಪ್ರಭಾವದ ಬಗ್ಗೆ ಸಾರ್ವಜನಿಕರಿಗೆ ಮತ್ತು ಪ್ರವಾಸಿಗರಿಗೆ ತಿಳಿಸಲು ಆಯೋಜಿಸಲಾದ ಜಾಗೃತಿ ಕಾರ್ಯಕ್ರಮವಾಗಿದೆ.

NSS ಸ್ವಯಂಸೇವಕರು ಬೀಚ್ ಕ್ಲೀನಿಂಗ್ ಡ್ರೈವ್‌ನಲ್ಲಿ ಸಕ್ರಿಯವಾಗಿ ಭಾಗವಹಿಸಲು ಪ್ರತಿಜ್ಞೆ ಮಾಡಿದರು ಮತ್ತು ಏಕ ಬಳಕೆಯ ಪ್ಲಾಸ್ಟಿಕ್‌ಗಳು ಮತ್ತು ಮೈಕ್ರೋಪ್ಲಾಸ್ಟಿಕ್‌ಗಳ ಪ್ರಭಾವದ ಬಗ್ಗೆ ಜಾಗೃತಿಯನ್ನು ತರಲು ಪ್ರತಿಜ್ಞೆ ಮಾಡಿದರು.

ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಡಾ.ಬಾಲಕೃಷ್ಣ ಮದ್ದೋಡಿ ಡಾ ಆಶಾ ಸಿ ಎಸ್ ಮತ್ತು ಡಾ ಪೂರ್ಣಿಮಾ ಭಾಗವತ್ ಕಾರ್ಯಕ್ರಮವನ್ನು ಆಯೋಜಿಸಿದ್ದರು.