ಮಲ್ಪೆ : ಉಡುಪಿ ಜಿಲ್ಲೆ ವಿಶ್ವದಲ್ಲಿ ವಿಶೇಷ ಸ್ಥಾನಮಾನ ಗಳಿಸಿದ್ದು ಇಂದು ದೇಶದ ಎಲ್ಲ ಕಡೆಯಿಂದ ಜನರು ಉಡುಪಿಗೆ ಬರುತ್ತಿದ್ದಾರೆ. ಇಲ್ಲಿನ ಪರಶುರಾಮ ಫ್ರೆಂಡ್ಸ್ ಆಹಾರಮೇಳ ಆಯೋಜಿಸಿ ಕರಾವಳಿಯ ಖಾದ್ಯವನ್ನು ಉಣಬಡಿಸಿ ಪ್ರವಾಸಿಗರನ್ನು ಜಿಲ್ಲೆಗೆ ಆಕರ್ಷಿಸುವ ಕೆಲಸ ಮಾಡಿದ್ದಾರೆ ಎಂದು ಶಾಸಕ ಯಶ್‌ಪಾಲ್ ಸುವರ್ಣ ಹೇಳಿದರು.
ಅವರು ಮಲ್ಪೆ ಬೀಚ್‌ನಲ್ಲಿ ಪರಶುರಾಮ ಫ್ರೆಂಡ್ಸ್ ವತಿಯಿಂದ ಜ. 11ರಿಂದ14ರ ವರೆಗೆ ನಡೆಯುವ ‘ಮಲ್ಪೆ ಫುಡ್ ಫೆಸ್ಟ್’ ಎಂಬ ಆಹಾರ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.

ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್ ಮಾತನಾಡಿ, ನಮ್ಮ ಊರಿನ ಅಭಿವೃದ್ಧಿಗೆ ನಾವು ಪಕ್ಷಭೇದ ಮರೆತು ಒಟ್ಟಾಗಿ ಕೆಲಸ ಮಾಡಬೇಕು ಎಂದರು.
ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ರೈ ಶುಭ ಹಾರೈಸಿದರು.
ಸಂಗೀತಗಾರ ಅನುರಾಗ್ ನಾಯಕ್, ಶಾಸ್ತ್ರೀಯ ನೃತ್ಯ ಕಲಾವಿದೆ ಮಾನ್ಸಿ ಕೆ. ಕೋಟ್ಯಾನ್ ಮತ್ತು ಸಮರ್ಥ ಭಟ್ ಅವರನ್ನು ಸಮ್ಮಾನಿಸಲಾಯಿತು.

ಉದ್ಯಮಿ ಆನಂದ ಪಿ. ಸುವರ್ಣ, ಮಲ್ಪೆ ಕಾರ್ತಿಕ್ ಸಮೂಹ ಸಂಸ್ಥೆಯ ಮುಖ್ಯಸ್ಥ ಹರಿಯಪ್ಪ ಕೋಟ್ಯಾನ್,
ಮತ್ತ್ಸೋದ್ಯಮಿ ಇಬ್ರಾಹಿಂ, ಉದ್ಯಮಿ ಪುನೀತ್ ಉದಯ ಕುಮಾರ್, ಮಲ್ಪೆ ಪರ್ಸಿನ್ ಮೀನುಗಾರರ ಸಂಘದ
ಅಧ್ಯಕ್ಷ ನಾಗರಾಜ್ ಸುವರ್ಣ, ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿ ಅಧ್ಯಕ್ಷ ಪಾಂಡುರಂಗ ಮಲ್ಪೆ ನಗರಸಭಾ ಸದಸ್ಯೆ ಲಕ್ಷ್ಮೀ ಮಂಜುನಾಥ್, ಪರಶುರಾಮ್ ಫ್ರೆಂಡ್ಸ್ ಅಧ್ಯಕ್ಷ ದೇವದಾಸ್ ಸುವರ್ಣ ಮೊದಲಾದವರು ಮುಖ್ಯ ಅತಿಥಿಗಳಾಗಿದ್ದರು. ಸಂತೋಷ್ ಕೊಳ ಸ್ವಾಗತಿಸಿ, ಮಂಜು ಕೊಳ ವಂದಿಸಿದರು.
