ಮಲ್ಪೆ : ಇಂದಿನಿಂದ ಉಡುಪಿಯಲ್ಲಿ ಖಾದ್ಯಪ್ರಿಯರ ಆಹಾರದ ಆಸೆಯನ್ನು ಈಡೇರಿಸಲು ಮಲ್ಪೆ ಆಹಾರಮೇಳ ಶುರುವಾಗಿದೆ. ಇಲ್ಲಿನ ಪರಶುರಾಮ ಫ್ರೆಂಡ್ಸ್ ವತಿಯಿಂದ ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಜ.11ರಿಂದ 14ರವರೆಗೆ 4 ದಿನಗಳ ಕಾಲ ಮಲ್ಪೆ ಫುಡ್ ಫೆಸ್ಟ್ ಎಂಬ ಆಹಾರ ಮೇಳ ನಡೆಯಲಿದ್ದು ವಿವಿಧ ಅಹಾರ ಮೇಳಗಳ ಸ್ಟಾಲ್ಗಳು, ಸಾಂಸ್ಕೃತಿಕ ವೇದಿಕೆಗಳು ಜಿಲ್ಲೆಯ ಜನರನ್ನು ಸೆಳೆಯುವಂತೆ ಆಯೋಜನೆಗೊಂಡಿದೆ.
ಬೃಹದಾಕರಾದ ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ರಂಗೇಳಲಿವೆ.
ಇಂದು ಸಂಜೆ ಸ್ಥಳೀಯ 5 ಭಜನಾ ಮಂದಿರಗಳ ಅಧ್ಯಕ್ಷರು ಹಾಗೂ ಮಲ್ಪೆ ಅಯ್ಯಪ್ಪಸ್ವಾಮಿ ಮಂದಿರದ ಗುರುಸ್ವಾಮಿಯಿಂದ ಸ್ಟಾಲ್ಗಳು ಉದ್ಘಾಟನೆಗೊಂಡಿವೆ.
ಸಂಜೆ 7ಕ್ಕೆ ಆಹಾರ ಮೇಳದ ಉದ್ಘಟನಾ ಸಮಾರಂಭವು ವೇದಿಕೆಯಲ್ಲಿ ನಡೆಯಲಿದೆ. ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್ ನ ಪ್ರವರ್ತಕ ನಾಡೋಜ ಡಾ| ಜಿ. ಶಂಕರ್ ಉದ್ಘಾಟಿಸಲಿದ್ದು, ಶಾಸಕ ಯಶ್ ಪಾಲ್ ಸುವರ್ಣ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಪ್ರಮುಖ ಗಣ್ಯರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಪ್ರತೀ ದಿನ ಖಾದ್ಯ ವೈವಿದ್ಯ:
ಸಂಜೆ 4 ಗಂಟೆಗೆ ಸ್ಟಾಲ್ ಗಳು ತೆರೆದುಕೊಳ್ಳಲಿವೆ. ರಾತ್ರಿ 10.30 ರವರೆಗೆ ಗ್ರಾಹಕರಿಗಾಗಿ ಸೇವೆ ನೀಡಲಿವೆ.
ಆಹಾರಮೇಳದಲ್ಲಿ ವಿವಿಧ ಬಗೆಯ ಮೀನಿನ ವಿವಿಧ ರೀತಿಯ ಫ್ರೈ, ಚಿಕನ್ ತಂದೂರಿ, ಶೋರ್ಮ ಸಹಿತವಾಗಿ ಕೋಳಿಯ ವಿವಿಧ ಬಗೆಯ ಖಾದ್ಯಗಳು, ದೊಣ್ಣೆ ಬಿರಿಯಾನಿ, ಕರಕುಶಲ, ಕೈಮಗ್ಗದ ಉತ್ಪನ್ನ, ಮೀನಿನ ಮಸಾಲ, ಉಪ್ಪಿನಕಾಯಿ, ಫ್ಯಾನ್ಸಿ, ಬೊಂಡ ಐಸ್ಕ್ರೀಮ್ ಮಾರಾಟದ ಮಳಿಗೆಗಳಿದ್ದು ಆಹಾರ ಪ್ರಿಯರನ್ನು ತಣಿಸಲಿದೆ.
ಆಕಾಶಕ್ಕೆ ಹಾರಲಿವೆ ಆಕಾಶದೀಪ:
ಮಲ್ಪೆ ಬೀಚ್ನಲ್ಲಿ ಜ. 14ರ ರಾತ್ರಿ 10 ಗಂಟೆಗೆ ಲ್ಯಾಂಟರ್ನ್ ಫೆಸ್ಟಿವಲ್ ಜಗಜಗಿಸಲಿದೆ.
ಸಾವಿರಕ್ಕೂ ಹೆಚ್ಚು ಲ್ಯಾಂಟನ್ಗಳನ್ನು ಆಕಾಶಕ್ಕೆ ಹಾರಿ ಬಿಡಲಾಗುತ್ತದೆ. ಮಾತ್ರವಲ್ಲದೆ ಪ್ರತಿನಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು ಲೈವ್ ಮ್ಯೂಕ್, ಡ್ಯಾನ್ಸ್ ಸಿಡಿಮದ್ದು ಪ್ರದರ್ಶನ ನಡೆಯಲಿದೆ.
ವಿಶೇಷ ಆಕರ್ಷಣೆಯಾಗಿ ಜ.14ರಂದು ಚೀನಾದ ಬೃಹತ್ ಲಯನ್ನ ಪ್ರದರ್ಶನಗೊಳ್ಳಲಿದ್ದು, ಪ್ರತಿದಿನ ಸುಮಾರು 30 ರಿಂದ 40 ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಪರಶುರಾದು ಫ್ರೆಂಡ್ ಅಧ್ಯಕ್ಷ ದೇವದಾಸ್ ಸುವರ್ಣ ತಿಳಿಸಿದ್ದಾರೆ. ಜನಗಳ ಬಾಯಲ್ಲಿ ನೀರೂರಿಸುವ ಬಗೆ ಬಗೆ ಖಾದ್ಯವೈವಿದ್ಯಗಳಿಂದ ಉಡುಪಿಯ ಜನ ಸಂಭ್ರಮ ಪಡೋದು ಗ್ಯಾರಂಟಿ.