ಮದ್ಯಪ್ರಿಯರಿಗೆ ಮತ್ತೊಮ್ಮೆ ಶಾಕ್ ನೀಡಿದ ರಾಜ್ಯ ಸರ್ಕಾರ: ಇಂದಿನಿಂದ ಬಿಯರ್ ದರದಲ್ಲಿ ಏರಿಕೆ

ಬೆಂಗಳೂರು: ಬಿಯರ್ ಪ್ರಿಯರಿಗೆ ರಾಜ್ಯ ಸರ್ಕಾರ ಮತ್ತೊಮ್ಮೆ ಶಾಕ್ ಕೊಟ್ಟಿದೆ. ಇಂದಿನಿಂದ ಬಿಯರ್ ಬಾಟಲಿ ದರ 10 ರೂಪಾಯಿಂದ 15 ರೂಪಾಯಿ ಹೆಚ್ಚಳವಾಗಲಿದೆ. ಈ ಮೂಲಕ ಕಳೆದ 7 ತಿಂಗಳಲ್ಲಿ ಬರೊಬ್ಬರಿ ಮೂರನೇ ಬಾರಿಗೆ ಬಿಯರ್ ದರದಲ್ಲಿ ಏರಿಕೆ ಕಂಡಿದೆ.

ರಾಜ್ಯ ಸರ್ಕಾರ ಬಿಯರ್‌ ಮೇಲಿನ ಹೆಚ್ಚುವರಿ ಅಬಕಾರಿ ಸುಂಕ ಶೇ.185 ರಿಂದ 195ಕ್ಕೆ ಹೆಚ್ಚಳ ಮಾಡಿದೆ. ರಾಜ್ಯ ಅಬಕಾರಿ‌ ಇಲಾಖೆ ಜನವರಿ 20ಕ್ಕೆ‌ ಸುಂಕ ಹೆಚ್ಚಳ ಕುರಿತಂತೆ ಕರಡನ್ನು ಪ್ರಕಟಿಸಿತ್ತು. ಕರ್ನಾಟಕ ಅಬಕಾರಿ ನಿಯಮ 1968 ತಿದ್ದುಪಡಿ ಮಾಡಲು ಕರಡು ಅಧಿಸೂಚನೆಯಲ್ಲಿ ಪ್ರಕಟ ಮಾಡಿತ್ತು. ಇದಕ್ಕೆ ರಾಜ್ಯ ಸರ್ಕಾರವು ಒಪ್ಪಿಗೆ ಸೂಚಿಸಿತ್ತು. ಆದರೆ ನಿನ್ನೆ ಸುಂಕ ಏರಿಕೆಯ ಕುರಿತು ಅಬಕಾರಿ ಇಲಾಖೆ ಅಂತಿಮ ಆದೇಶ ಹೊರಡಿಸಿದೆ.

ರಾಜ್ಯದಲ್ಲಿ ತಯಾರಿಸುವ ಹಾಗೂ ಆಮದು ಮಾಡಿಕೊಳ್ಳುವ ಬಿಯರ್‌ನ ಮೇಲಿನ ಸುಂಕ ಹೆಚ್ಚು ಮಾಡಲಿದೆ.