ಮದರ್ ತೆರೇಸಾಸ್ ಪದವಿ ಪೂರ್ವ ಕಾಲೇಜು: ನೂತನ ಉಪಪ್ರಾಂಶುಪಾಲರಾಗಿ ಜೈಸನ್ ಲುವಿಸ್ ನೇಮಕ.

ಶಂಕರನಾರಾಯಣ : ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಮದರ್ ತೆರೇಸಾ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್, ಕುಂದಾಪುರ ಪ್ರವರ್ತಿತ ಮದರ್ ತೆರೇಸಾಸ್ ಪದವಿ ಪೂರ್ವ ಕಾಲೇಜಿಗೆ ಆಡಳಿತ ಮಂಡಳಿ ವಿಜ್ಞಾನ ವಿಭಾಗದಲ್ಲಿ ಅಭ್ಯಸಿಸುವ ವಿದ್ಯಾರ್ಥಿಗಳಿಗೆ ಇನ್ನೂ ಹೆಚ್ಚಿನ ಸೌಲಭ್ಯ ನೀಡಿ, ಸಿ ಇ ಟಿ /ಜೆ ಇ ಇ ಮೈನ್ಸ್ / ನೀಟ್ /ಐ ಐ ಟಿ ಯಲ್ಲಿ ಅತ್ತ್ಯುತ್ತಮ ಫಲಿತಾಂಶ ಪಡೆಯುವ ಉದ್ದೇಶದಿಂದ ಜಿಲ್ಲೆಯ ವಿವಿಧ ಕಾಲೇಜಿನಲ್ಲಿ ಭೌತಶಾಸ್ತ್ರ ಉಪನ್ಯಾಸಕರಾಗಿ 26 ವರ್ಷಗಳಸುದೀರ್ಘ ಅನುಭವ ಹೊಂದಿರುವ ಬ್ರಹ್ಮಾವರದ ಜೈಸನ್ ಲುವಿಸ್ ಅವರು ಉಪಪ್ರಾಂಶುಪಾಲರಾಗಿ ನೇಮಕಗೊಂಡಿರುತ್ತಾರೆ.

ಇವರಿಗೆ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿವರ್ಗ ಶುಭಾಶಯ ಕೋರಿರುತ್ತಾರೆ.

ಉಪಾಪ್ರಾಂಶುಪಾಲರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಜೈಸನ್ ಲುವಿಸ್ ಸಂಸ್ಥೆಯ ಉತ್ತರೋತ್ತರ ಅಭಿವೃದ್ಧಿಗೆ ಹಾಗೂ ವಿದ್ಯಾರ್ಥಿಗಳ ಗುಣಮಟ್ಟದ ಫಲಿತಾಂಶಕ್ಕೆ ಪ್ರಾಮಾಣಿಕತೆ ಮತ್ತು ನಿಷ್ಠೆಯಿಂದ ಸೇವೆ ಸಲ್ಲಿಸುವುದಾಗಿ ಆಡಳಿತ ಮಂಡಳಿಗೆ ಭರವಸೆ ನೀಡಿರುತ್ತಾರೆ.