ಮಣಿಪಾಲ: ಮನೆಗೆ ನುಗ್ಗಿ ಚಿನ್ನಾಭರಣ ಕಳವು.

ಮಣಿಪಾಲ: ಉಡುಪಿ ಕುಂಜಿಬೆಟ್ಟುವಿನಲ್ಲಿ ಮನೆಗೆ ನುಗ್ಗಿ ಮನೆಯಲ್ಲಿದ್ದ ಚಿನ್ನಾಭರಣ ಕಳವು ಮಾಡಿದ ಘಟನೆ ನಡೆದಿದೆ.

ಜೂ.5ರಂದು ಆರೋಪಿಗಳಾದ ವಾರಿಜಾ, ಗುಣಲಕ್ಷ್ಮೀ, ಮಮತಾ ಹಾಗೂ ರಿಕ್ಷಾ ಚಾಲಕರೊಬ್ಬರು ಕುಂಜಿಬೆಟ್ಟುವಿನ ಶಾಂತಾ ಅವರ ಮನೆಯ ಹಿಂದಿನ ಬದಿಯ ಹಂಚನ್ನು ಸರಿಸಿ ಮನೆಗೆ ಅಕ್ರಮ ಪ್ರವೇಶ ಮಾಡಿ ಬಟ್ಟೆ ಬರೆ, ಸೂಟ್‌ ಕೇಸ್‌, 2 ಗ್ರಾಂ ತೂಕದ ಉಂಗುರ ಹಾಗೂ 1 ಗ್ರಾಂ ತೂಕದ ಬಂಗಾರದ ನಾಣ್ಯಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.