ಮಣಿಪಾಲ ಡಾ. ಟಿಎಂಎ ಪೈ ಪಾಲಿಟೆಕ್ನಿಕ್ ನಲ್ಲಿ ಬೃಹತ್ ಉದ್ಯೋಗ ಮೇಳ; ಅಭ್ಯರ್ಥಿಗಳಿಂದ ಉತ್ತಮ ಸ್ಪಂದನೆ.

ಉಡುಪಿ: ಮಣಿಪಾಲ ಡಾ. ಟಿಎಂಎ ಪೈ ಪಾಲಿಟೆಕ್ನಿಕ್ ಸಂಸ್ಥೆ ಹಾಗೂ ಯಶಸ್ ಮ್ಯಾನೇಜ್ಮೆಂಟ್ ಸೋಲೂಷನ್ ಪ್ರೈವೇಟ್ ಲಿಮಿಟೆಡ್ ಬೆಂಗಳೂರು ಇದರ ಸಹಯೋಗದಲ್ಲಿ ಮಣಿಪಾಲ ಈಶ್ವರನಗರದ ಡಾ. ಟಿಎಂಎ ಪೈ ಪಾಲಿಟೆಕ್ನಿಕ್ ಸಂಸ್ಥೆಯಲ್ಲಿ ಆಯೋಜಿಸಿದ ಉದ್ಯೋಗ ಮೇಳಕ್ಕೆ ಅಭ್ಯರ್ಥಿಗಳಿಂದ ಉತ್ತಮ ಸ್ಪಂದನೆ ದೊರಕಿದೆ.
ಇಂದು ನಡೆದ ಉದ್ಯೋಗ ಮೇಳದಲ್ಲಿ ಅನ್ ಲೈನ್ ಮೂಲಕ 808 ಮಂದಿ ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದರು. ಆ ಪೈಕಿ 503 ಮಂದಿ ಹಾಜರಾಗಿದ್ದು, 333 ಮಂದಿ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಒಟ್ಟು ಶೇ.66ರಷ್ಟು ಮಂದಿಗೆ ವಿವಿಧ ಕಂಪೆನಿಗಳಲ್ಲಿ ಉದ್ಯೋಗ ಲಭಿಸಿದೆ.


ಎಂಎಸ್ ಡಿಸಿ ಅಧ್ಯಕ್ಷ ಡಾ. ಸುರ್ಜಿತ್ ಸಿಂಗ್ ಪಾಬ್ಲ ಮಾತನಾಡಿ, ನಮ್ಮ ಸಂಸ್ಥೆಯಲ್ಲಿ 250 ಕ್ಕೂ ಅಧಿಕ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.ಭಾರತದಲ್ಲಿಯೇ ಮಹತ್ತರವಾಗಿ ಡಾ.ಟಿಎಂಎ ಪೈ ಪಾಲಿಟೆಕ್ನಿಕ್ ಸಂಸ್ಥೆಯನ್ನು ಬೆಳೆಸುತ್ತಿದ್ದೇವೆ. ಶಿಕ್ಷಣದ ಜೊತೆಗೆ 100%ಉದ್ಯೋಗ ಗ್ಯಾರಂಟಿ ಕೂಡ ನೀಡುತ್ತಿದ್ದೇವೆ. ಉದ್ಯೋಗ ಕ್ಷೇತ್ರದಲ್ಲಿ ಅವಕಾಶ ಇಲ್ಲ ಎನ್ನುವುದೇನೂ ಇಲ್ಲ.ಅವಕಾಶಗಳನ್ನು ಸೃಷ್ಟಿಸುವಲ್ಲಿ ನಾವು ಶ್ರಮಿಸುತ್ತಿದ್ದೇವೆ. ಕೌಶಲ್ಯದ ಜೊತೆಗೆ ಉದ್ಯೋಗ ನಮ್ಮ ಆದ್ಯತೆ ಎಂದರು.

ಅಡ್ಮಿಷನ್ ಆಫೀಸರ್ ಎಂಎಸ್‌ಟಿಸಿ ಡಾ. ನಾರಾಯಣ್ ಶೆಣೈ ಮಾತನಾಡಿ, ಉದ್ಯೋಗ ಮೇಳಕ್ಕೆ ಅಭ್ಯರ್ಥಿಗಳಿಂದ ಉತ್ತಮ ಸ್ಪಂದನೆ ಸಿಕ್ಕಿದೆ. 500 ಅಧಿಕ‌ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದು, ಅದರಲ್ಲಿ ಶೇ. 66ರಷ್ಟು ಅಭ್ಯರ್ಥಿಗಳಿಗೆ ಉದ್ಯೋಗ ಲಭಿಸಿದೆ ಎಂದರು. ಅಲ್ಲದೆ, ಇಲ್ಲಿ ಮಣಿಪಾಲ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ 20 ರೀತಿಯ ಕೌಶಲ್ಯ ತರಬೇತಿ ಕೋರ್ಸಗಳನ್ನು ಪರಿಚಯಿಸುತ್ತಿದ್ದು, ಅದರ ಲಾಭವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬಹುದು. ಟ್ರೋನ್ ಟೆಕ್ನಾಲಜಿ, ರೋಬೋಟಿಕ್, ತ್ರಿಡಿ ಪ್ರಿಂಟಿಂಗ್, ಫ್ಯಾಶನ್ ಡಿಸೈನ್, ಆಟೋ ಮೊಬೈಲ್ ಮೊದಲಾದ ಕೋರ್ಸ್ ಗಳನ್ನು ಕಲಿಯಬಹುದು. ಇಲ್ಲಿ ಕಲಿತರೆ ಇಂಜಿನಿಯರಿಂಗ್ ಕೋರ್ಸ್ ಡ್ಯಾಟಿಯಲ್ ಎಂಟ್ರಿ ಮೂಲಕ ಎರಡನೇ ವರ್ಷಕ್ಕೆ ಸೇರಬಹುದು. ಐಟಿಐ ಮಾಡಿದ ವಿದ್ಯಾರ್ಥಿಗಳು ಡ್ಯಾಟಿಯಲ್ ಎಂಟ್ರಿ ಮೂಲಕ ಎರಡನೇ ವರ್ಷಕ್ಕೆ ಸೇರಬಹುದು. ಇಂಜನಿಯರಿಂಗ್ ಆಗ ಬಯಸುವ ವಿದ್ಯಾರ್ಥಿಗಳಿಗೆ ಇದೊಂದು ಸುವರ್ಣ ಅವಕಾಶ ಎಂದರು.