ಮಣಿಪಾಲ: ಡಿಪ್ಲೊಮಾ ತಾಂತ್ರಿಕ ಶಿಕ್ಷಣದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಶ್ರೇಷ್ಠ ಸಂಸ್ಥೆ ಎಂಬ ಹೆಗ್ಗಳಿಕೆಯ ಡಾ.ಟಿಎಂಎ ಪೈ ಪಾಲಿಟೆಕ್ನಿಕ್ ಮಣಿಪಾಲ ಕೌಶಲ ಭರಿತ ತಾಂತ್ರಿಕ ಶಿಕ್ಷಣಕ್ಕೆ ಬೇಕಾದ ಸರ್ವ ಸೌಲಭ್ಯವುಳ್ಳ ಸುಸಜ್ಜಿತ ತಾಂತ್ರಿಕ ಶಿಕ್ಷಣ ಸಂಸ್ಥೆಯಾಗಿದೆ.
ಸರಕಾರಿ ಸಾಮಾನ್ಯ ಪ್ರವೇಶ ಪರೀಕ್ಷೆ ಸಿಇಟಿ ಹಾಗೂ ಮಣಿಪಾಲದ ಸಾಮಾನ್ಯ ಪ್ರವೇಶ ಪರೀಕ್ಷೆ ಎಂಐಟಿಯಲ್ಲಿ ಎಂಜಿನಿಯರಿಂಗ್ ಪದವಿಗೆ ಐಚ್ಛಿಕ ವಿಷಯದಲ್ಲಿ ಪ್ರವೇಶಾತಿ ದೊರಕದ ವಿದ್ಯಾರ್ಥಿಗಳಿಗೆ ತಮ್ಮ ಆಯ್ಕೆಯ ಎಂಜಿನಿಯರಿಂಗ್ ಪದವಿಯನ್ನು ಲ್ಯಾಟರಲ್ ಪ್ರವೇಶಾತಿ ಮೂಲಕ ದ್ವಿತೀಯ ವರ್ಷದ ಎಂಜಿನಿಯರಿಂಗ್ ಪದವಿ ಪ್ರವೇಶ ಪಡೆಯಲು ಒಂದು ಸುವರ್ಣ ಅವಕಾಶ.
ಡಾ.ಟಿಎಂಎ ಪೈ ಪಾಲಿಟೆಕ್ನಿಕ್ನಲ್ಲಿ ಡಿಪ್ಲೊಮಾ ಪದವಿ ಉತ್ತೀರ್ಣರಾದ ವಿದ್ಯಾರ್ಥಿಗಳು ಸರಕಾರಿ ಸ್ವಾಮ್ಯದ ಕಾಲೇಜುಗಳಲ್ಲಿ ಎಂಜಿನಿಯರಿಂಗ್ ದ್ವಿತೀಯ ವರ್ಷದ ದ್ವಿತೀಯ ವರ್ಷದ ವ್ಯಾಸಂಗ ಮುಂದುವರಿಸುವ ಅವಕಾಶ ಅಲ್ಲದೆ ಎಂಐಟಿ ಮಣಿಪಾಲದಲ್ಲಿ ಸೀಮಿತ ನಿಬಂಧನೆಯೊಂದಿಗೆ ದ್ವಿತೀಯ ವರ್ಷದ ಪದವಿಗೆ ಯಾವುದೇ ಪ್ರವೇಶ ಪರೀಕ್ಷೆ ಇಲ್ಲದೆ ಶೇ.75ಶುಲ್ಕ ವಿನಾಯಿತಿಯೊಂದಿಗೆ ಪ್ರವೇಶ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಸಂಸ್ಥೆಯಲ್ಲಿ ನೂತನ ಆವಿಷ್ಕಾರಗಳನ್ನು ಒಳಗೊಂಡ ಕೌಶಲಾಧಾರಿತ ಪ್ರಯೋಗಾಲಯಗಳಲ್ಲಿ ಡ್ರೋನ್ ರೋಬೋಟಿಕ್ ಪಿಸಿಬಿ ಹವಾ ನಿಯಂತ್ರಣ ಮತ್ತು ಶೀತಲೀಕರಣ ಎಲೆಕ್ಟ್ರಿಕಲ್ ವೆಹಿಕಲ್, ವುಡ್ವರ್ಕ್ ಕಿಂಗ್ ಸಿಎನ್ ಸಿ 3D ಪ್ರಿಂಟಿಂಗ್ ಮೊದಲಾದ ವಿಷಯಗಳಲ್ಲಿ ಉನ್ನತ ಕಲಿಕೆಗೆ ಪೂರಕ ಅವಕಾಶ ನೀಡಲಾಗುತ್ತಿದೆ. ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯ ದೃಷ್ಟಿಯಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಉತ್ತೇಜನಕ್ಕಾಗಿ ಒಳಾಂಗಣ ಮತ್ತು ಹೊರಾಂಗಣ ಕ್ರೀಡಾಂಗಣ ಅಲ್ಲದ ಫಿಟ್ನೆಸ್ ಸೆಂಟರ್ ಸೌಲಭ್ಯಗಳನ್ನು ಪ್ರತಿ ವಿದ್ಯಾರ್ಥಿಗಳಿಗೆ ಒದಗಿಸಲಾಗುತ್ತಿದೆ.
ವಿದ್ಯಾರ್ಥಿಯ ಕುಟುಂಬದ ಆದಾಯ 4 ಲಕ್ಷಕ್ಕಿಂತ ಕಡಿಮೆಯಿದ್ದರೆ, ಶಿಕ್ಷಣ ಸಾಲವು ಬಡ್ಡಿರಹಿತವಾಗಿದೆ. ಹಾಗೂ 3 ವರ್ಷಗಳ ಡಿಪ್ಲೊಮಾ ಎಂಜಿನಿಯರಿಂಗ್ ನಂತರ ಉದ್ಯೋಗ ಖಾತರಿ ಹಾಗೂ ಹುಡುಗ ಮತ್ತು ಹುಡುಗಿಯರಿಗೆ ಪ್ರತ್ಯೇಕ ಹಾಸ್ಟೆಲ್ ವಸತಿ ಜೊತೆಗೆ ಮೆಸ್ ಸೌಲಭ್ಯಯನ್ನು ಕಲ್ಪಿಸಿದೆ.
ಪ್ರವೇಶಾತಿಗಾಗಿ ಅರ್ಜಿ ನಮೂನೆ ಕಾಲೇಜಿನ ಅಡ್ಮಿಶನ್ ಸೆಲ್ನಲ್ಲಿ ಲಭ್ಯವಿದೆ.
ಹೆಚ್ಚಿನ ಮಾಹಿತಿಗಾಗಿ ಕಾಲೇಜಿನ ಕಚೇರಿಯನ್ನು ಸಂಪರ್ಕಿಸಬಹುದು. ವಾರದ ಎಲ್ಲ ದಿನವೂ ಕಾಲೇಜು ತೆರೆದಿದ್ದು ಮಾಹಿತಿಗಾಗಿ <https://tmapaipolytecjnic.edu.in ಸಂಪರ್ಕಿಸಬಹುದು.