ಮಣಿಪಾಲ ಡಾ.ಟಿಎಂಎ ಪೈ ಪಾಲಿಟೆಕ್ನಿಕ್‌’ನಲ್ಲಿ ಪ್ರಥಮ ವರ್ಷದ ದಾಖಲಾತಿ ಪ್ರಾರಂಭ.

ಮಣಿಪಾಲ: ಮಣಿಪಾಲ ಡಾ.ಟಿಎಂಎ ಪೈ ಪಾಲಿಟೆಕ್ನಿಕ್ ಸಂಸ್ಥೆಯು ಸಕಲ ಸೌಲಭ್ಯವನ್ನು ಹೊಂದಿದೆ. 39 ವರ್ಷಗಳಿಂದ ತಾಂತ್ರಿಕ ವ್ಯಾಸಂಗ ನೀಡುತ್ತಿರುವ ಈ ಸಂಸ್ಥೆಯಲ್ಲಿ ಪ್ರಥಮ ವರ್ಷದ ಪ್ರವೇಶ ಪ್ರಕ್ರಿಯೆ ಆರಂಭಗೊಂಡಿದೆ.

ಸವಲತ್ತುಗಳಲ್ಲಿ ಸಂಸ್ಥೆ ರಾಜ್ಯದಲ್ಲಿಯೇ ಪ್ರಥಮ:

ಸುಸಜ್ಜಿತ ಪ್ರಯೋಗಾಲಯಗಳು, ಗ್ರಂಥಾಲಯ, ಗಾಳಿ ಬೆಳಕಿರುವ ವಿಶಾಲ ತರಗತಿ ಕೊಠಡಿಗಳು, ಬೋಧನೆ ಮತ್ತು ಸವಲತ್ತುಗಳಲ್ಲಿ ಈ ಸಂಸ್ಥೆ ರಾಜ್ಯದಲ್ಲಿಯೇ ಪ್ರಥಮವೆನಿಸಿ ಕೊಂಡಿದೆ. ಈ ಸಂಸ್ಥೆಯು ಪ್ರತಿಷ್ಠಿತ ಡಾ.ಟಿಎಂಎ ಪೈ ಪ್ರತಿಷ್ಠಾನದ ಆಡಳಿತಕ್ಕೆ ಒಳಪಟ್ಟಿದೆ.

ಮೂರು ವರ್ಷ ಅವಧಿಯ ತಾಂತ್ರಿಕ ಡಿಪ್ಲೋಮಾ ಕೋರ್ಸ್ಗಳು:

ಆಟೋಮೊಬೈಲ್ ಇಂಜಿನಿಯರಿಂಗ್, ಸಿವಿಲ್ ಇಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯೂನಿಕೇಶನ್ ಇಂಜಿನಿಯರಿಂಗ್, ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರೋನಿಕ್ಸ್ ಇಂಜಿನಿಯರಿಂಗ್, ಮೆಕ್ಯಾನಿಕಲ್ ಇಂಜಿನಿಯರಿಂಗ್, ಮೆಕೆಟ್ರಾನಿಕ್ಸ್ ಇಂಜಿನಿಯರಿಂಗ್, ಪ್ರಿಂಟಿಂಗ್ ಟೆಕ್ನಾಲಜಿ (ಕರ್ನಾಟಕದಲ್ಲಿ ಪ್ರಿಂಟಿಂಗ್ ಟೆಕ್ನಾಲಜಿ ಡಿಪ್ಲೋಮಾ ನೀಡುತ್ತಿರುವ ಏಕೈಕ ಖಾಸಗಿ ಸಂಸ್ಥೆಯಾಗಿದೆ) ಎಂಬ ಎಂಟು ವಿಭಾಗಗಳಲ್ಲಿ ಮೂರು ವರ್ಷ ಅವಧಿಯ ತಾಂತ್ರಿಕ ಶಿಕ್ಷಣವನ್ನು ನೀಡಲಾಗುತ್ತಿದೆ.

ಉದ್ಯೋಗ ದೊರಕಿಸಿಕೊಡುವಲ್ಲಿ ಸಹಕಾರಿ:

ಎಲ್ಲ ಕೋರ್ಸುಗಳು ಕರ್ನಾಟಕ ತಾಂತ್ರಿಕ ಶಿಕ್ಷಣ ಮಂಡಳಿಯ (DTE) ಸಂಯೋಜನೆಗೊಳಪಟ್ಟು ಹಾಗೂ AICTEಯಿಂದ ಮಾನ್ಯತೆ ಪಡೆದಿದೆ. ಈ ಸಂಸ್ಥೆಯು ಪ್ರತ್ಯೇಕ ಪ್ಲೇಸ್ಮೆಂಟ್ ಸೆಲ್ ಹೊಂದಿದ್ದು ಯಶಸ್ವಿಯಾಗಿ ಡಿಪ್ಲೊಮಾ ಮುಗಿಸಿದ ವಿದ್ಯಾರ್ಥಿಗಳಿಗೆ ಉದ್ಯೋಗ ದೊರಕಿಸಿಕೊಡುವಲ್ಲಿ ಸಹಕರಿಸುತ್ತದೆ.

ಕುಟುಂಬದ ಆದಾಯ 4 ಲಕ್ಷಕ್ಕಿಂತ ಕಡಿಮೆಯಿದ್ದರೆ ಬಡ್ಡಿರಹಿತ ಸಾಲ:

ವಿದ್ಯಾರ್ಥಿಯ ಕುಟುಂಬದ ಆದಾಯ 4 ಲಕ್ಷಕ್ಕಿಂತ ಕಡಿಮೆಯಿದ್ದರೆ, ಶಿಕ್ಷಣ ಸಾಲವು ಬಡ್ಡಿರಹಿತವಾಗಿದೆ.

MIT BTech ಲ್ಯಾಟರಲ್ ಪ್ರವೇಶಾತಿಗೆ 75% ಶುಲ್ಕ ರಿಯಾಯಿತಿ:

75% ಶುಲ್ಕ ರಿಯಾಯಿತಿಯಲ್ಲಿ ಮಣಿಪಾಲಕ್ಕೆ MIT BTech ಲ್ಯಾಟರಲ್ ಪ್ರವೇಶಾತಿ ಮಾಡಬಹುದು. ಹಾಗೂ 3 ವರ್ಷಗಳ ಡಿಪ್ಲೊಮಾ ಎಂಜಿನಿಯರಿಂಗ್ ನಂತರ ಉದ್ಯೋಗ ಖಾತರಿ ಹಾಗೂ ಹುಡುಗ ಮತ್ತು ಹುಡುಗಿಯರಿಗೆ ಪ್ರತ್ಯೇಕ ಹಾಸ್ಟೆಲ್ ವಸತಿ ಜೊತೆಗೆ ಮೆಸ್ ಸೌಲಭ್ಯಯನ್ನು ಕಲ್ಪಿಸಿದೆ.

ಯಾವುದೇ ವಿಷಯದಲ್ಲಿ ಡಿಪ್ಲೊಮಾ ಪಡೆದ ಅನಂತರ ನೇರವಾಗಿ ಎರಡನೇ ವರ್ಷದ ಎಂಜಿನಿಯರಿಂಗ್ ವ್ಯಾಸಂಗಕ್ಕೆ ಪ್ರವೇಶ ಪಡೆಯಬಹುದಾಗಿದೆ. ಪ್ರವೇಶಾತಿ ಅರ್ಜಿ ಕಾಲೇಜಿನ ಅಡ್ಮಿಶನ ಸೆಲ್ ನಲ್ಲಿ ಲಭ್ಯವಿದೆ.

ಹೆಚ್ಚಿನ ಮಾಹಿತಿಗಾಗಿ ಮಣಿಪಾಲದ ಡಾ.ಟಿಎಮ್ಎ ಪೈ ಪಾಲಿಟೆಕ್ನಿಕ್ ಕಚೇರಿ ಸಂಪರ್ಕಿಸಬಹುದು ಹಾಗೂ ವಾರದ ಎಲ್ಲ ದಿನವೂ ಕಾಲೇಜು ತೆರೆದಿದ್ದು ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್ web: https://tmapaipolytechnic.edu.in ಸಂಪರ್ಕಿಸಬಹುದು. ಮೊ: 7483182179, 8310276314