ಮಣಿಪಾಲ: ಗಾಂಜಾ ಸೇವನೆ – ಒಟ್ಟು 7 ಮಂದಿ ಪೊಲೀಸರ ವಶಕ್ಕೆ.

ಮಣಿಪಾಲ, ಮೇ 17: ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಸೇವನೆಗೆ ಸಂಬಂಧಿಸಿ ಒಟ್ಟು ಏಳು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮೇ.14ರಂದು ಮಣಿಪಾಲ ವಿದ್ಯಾರತ್ನ ನಗರದ ಐರಿಶ್ ಫ್ಲಾಜಾದ ಬಳಿ ನಿಶಾಂತ್(22), ಅಮಿತ್(20), ಮೇ 12ರಂದು ಪ್ರಜ್ವಲ್(21), ಆರ್ಯನ್ (20), ಪ್ರಧುಮಾನ್, ಹೆಮಾನ್ಯ(20), ಸುಭಾಸ್(23) ಎಂಬವರನ್ನು ವಶಕ್ಕೆ ಪಡೆದು ಮಣಿಪಾಲ ಆಸ್ಪತ್ರೆಯ ಪೊರೆನ್ಸಿಕ್ ಮೆಡಿಸಿನ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಿದ್ದು ಪರೀಕ್ಷಿಸಿದ ವೈದ್ಯರು ಆರೋಪಿಗಳು ಗಾಂಜಾ ಸೇವನೆ ಮಾಡಿರುವುದು ದೃಢಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.