ಮಣಿಪಾಲ:ಶ್ರೀ ಸೇವಾ ಸಂಗಮ ವಿದ್ಯಾ ಕೇಂದ್ರ ವಿದ್ಯಾಗಿರಿ, ತೆಕಟ್ಟೆ ಶಾಲೆಗೆ ಟಿ.ಎ.ಪೈ ಮ್ಯಾನೇಜ್ಮೆಂಟ್ ಇನ್ಸ್ಟಿಟ್ಯೂಟ್ ಅಲುಮ್ನಿ ಅಸೋಸಿಯೇಷನ್ (ರಿ) ವತಿಯಿಂದ ಕೊಡುಗೆಯಾಗಿ ನೀಡಿದ ಸುಮಾರು ರೂ 60,000 ಮೌಲ್ಯದ ಕ್ರೀಡಾ ಸಾಮಗ್ರಿ, ಆಟಿಕೆಗಳ ಹಸ್ತಾಂತರ ಕಾರ್ಯಕ್ರಮ ನಡೆಯಿತು.
ಮುಖ್ಯ ಅತಿಥಿಯಾಗಿ ಟಿ.ಎ.ಪೈ ಮ್ಯಾನೇಜ್ಮೆಂಟ್ ಇನ್ಸ್ಟಿಟ್ಯೂಟ್ ಅಲುಮ್ನಿ ಅಸೋಸಿಯೇಷನ್ ನ ಕಾರ್ಯದರ್ಶಿ ರಾಜೇಂದ್ರ ಕಾಮತ್ ಮಾತನಾಡುತ್ತಾ ಅನೇಕ ವರ್ಷಗಳಿಂದ ಈ ಶಾಲೆಗೆ ಹಲವು ಬಾರಿ ಭೇಟಿ ನೀಡಿದ್ದು ಇಂದಿನ ಆಧುನಿಕ ಶಿಕ್ಷಣಕ್ಕೆ ಅನುಕೂಲವಾಗುವಂತಹ ಆಟಿಕೆಗಳನ್ನು ಹಾಗೂ ಕ್ರೀಡಾ ಸಾಮಗ್ರಿಗಳನ್ನು ನೀಡಲಾಗಿದೆ. ಮಕ್ಕಳು ಇದರ ಸದುಪಯೋಗ ಪಡೆದುಕೊಂಡು ಉತ್ತಮವಾಗಿ ನಿರ್ವಹಣೆ ಮಾಡಬೇಕು ಎಂದರು.
ಅಸೋಸಿಯೇಷನ್ ನ ಅಧಿಕಾರಿ ಡಾ.ಮಂಜುನಾಥ್ ಮಾತನಾಡುತ್ತಾ ಈ ಸಂಸ್ಥೆ ಉಡುಪಿ ಭಾಗದ ಸುತ್ತಮುತ್ತಲಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಈ ಬಾರಿ ಗ್ರಾಮೀಣ ಪ್ರದೇಶದ ಶಾಲೆಗಳ ಹಲವು ಮನವಿ ಬಂದಿದ್ದರಿಂದ ಈ ಭಾಗದಲ್ಲಿ ನೀಡುವಂತಾಗಿದೆ ಎಂದರು.
ವೇದಿಕೆಯಲ್ಲಿ ಸೇವಾ ಸಂಗಮ ವಿದ್ಯಾಕೇಂದ್ರ ಶಾಲೆಯ ಕಾರ್ಯದರ್ಶಿ ಕಮಲಾಕ್ಷ ಪೈ, ಕೋಶಾಧಿಕಾರಿ ಸುಹಾಸ ಪೈ ಉಪಸ್ಥಿತರಿದ್ದರು.ಪ್ರಾಂಶುಪಾಲೆ ಸಂಧ್ಯಾ ಭಟ್ ಸ್ವಾಗತಿಸಿದರು. ದೈಹಿಕ ಶಿಕ್ಷಕ ಸಂತೋಷ ಖಾರ್ವಿ ಸಹಕರಿಸಿದರು.