ಕಾಸರಗೋಡು,ಮಾ.04: ಸೋಮವಾರ ರಾತ್ರಿ ಮಂಜೇಶ್ವರ ಬಳಿಯ ಉಪ್ಪಳ ಬ್ರಿಡ್ಜ್ ಸಮೀಪ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಡಿವೈಡರ್ ಗೆ ಕಾರು ಡಿಕ್ಕಿ ಯಾದ ರಭಸಕ್ಕೆ ಕಾರು ತುಂಡು ತುಂಡಾಗಿ ರಸ್ತೆಗೆಸೆಯಲ್ಪಟ್ಟ ಘಟನೆ ನಡೆದಿದೆ.
ಕಾರಿನಲ್ಲಿದ್ಡ ನಾಲ್ವರಲ್ಲಿ ಮೂವರು ಸಾವನಪ್ಪಿದ್ದು ಇನ್ನೊಬ್ಬರು ಗಂಭೀರ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ.
ಮೃತರನ್ನು ಕಾಸರಗೋಡು ಪೈವಳಿಕೆ ಬಾಯಿಕಟ್ಚೆಯ ನಿವಾಸಿ ಜನಾರ್ದನ, ವರುಣ್, ಕೃಷ್ಣ ಎಂದು ತಿಳಿದುಬಂದಿದೆ.
ಮೃತದೇಹವನ್ನು ಮಂಗಳೂರಿನ ಆಸ್ಪತ್ರೆಗೆ ರವಾನಿಸಿದ್ದು ಸ್ಥಳಕ್ಕೆ ಸ್ಥಳೀಯ ಪೋಲಿಸರು ಭೇಟಿನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.












