ಮಂಗಳೂರು, ಅ.26: ಸೈಟ್ ತೋರಿಸುವ ನೆಪದಲ್ಲಿ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದ ಮೇರೆಗೆ ನಗರದ ಬಿಲ್ಡರ್ ವಿರುದ್ಧ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಣದ ಆಮಿಷ ತೋರಿಸಿ ಮಾನಭಂಗ:
ತಾನು ಕೊಡಗು ಜಿಲ್ಲೆಯ ಮಡಿಕೇರಿಯವಳಾಗಿದ್ದು, ಮಂಗಳೂರು ಮತ್ತು ದುಬೈಯಲ್ಲಿ ವ್ಯವಹಾರ ಮಾಡಿಕೊಂಡಿರುವೆ. ಸದ್ಯ ಮಂಗಳೂರಿನಲ್ಲಿ ವಾಸವಾಗಿರುವ ನನಗೆ ಬಿಲ್ಡರ್ ಆಗಿರುವ ಆರೋಪಿ ರಶೀದ್ನ ಪರಿಚಯವಿತ್ತು. ಆತನಿಗೆ ಕುಶಾಲನಗರದಲ್ಲಿ ಒಳ್ಳೆಯ ಸೈಟ್ ಇದೆ. ಅದನ್ನು ಖರೀದಿ ಮಾಡಬಹುದು ಎಂದಾಗ ನಾನು ಒಪ್ಪಿಕೊಂಡು ಅ.21ರಂದು ಕಾರಿನಲ್ಲಿ ಕುಶಾಲನಗರಕ್ಕೆ ಆತನೊಂದಿಗೆ ಹೋಗಿದ್ದೆ. ಅಲ್ಲಿ ಆತ ಅನುಚಿತವಾಗಿ ವರ್ತಿಸಿದಾಗ ತಾನು ವಿರೋಧಿಸಿದೆ. ಅಲ್ಲದೆ ಆರೋಪಿ ರಶೀದ್ ಕಾರಿನಲ್ಲಿ ಮಂಗಳೂರಿಗೆ ಮರಳುವಾಗಲೂ ದಾರಿ ಮಧ್ಯೆ ಹಣದ ಆಮಿಷ ತೋರಿಸಿ ಮಾನಭಂಗಗೈದು ಕೊನೆಗೆ ಫ್ಲ್ಯಾಟ್ಗೆ ತಂದು ಬಿಟ್ಟಿದ್ದಾನೆ. ಈ ವಿಚಾರವನ್ನು ತಾನು ತನ್ನ ಕೆಫೆಯ ಮ್ಯಾನೇಜರ್ಗೆ ತಿಳಿಸಿದ್ದು, ಆ ಸಿಟ್ಟಿನಿಂದ ರಶೀದ್ ನಗರದ ಕಾಪ್ರಿಗುಡ್ಡ ಬಳಿ ತನಗೆ ಅವಾಚ್ಯ ಶಬ್ದಗಳಿಂದ ಬೈದು ಕೆನ್ನೆಗೆ ಹೊಡೆದು ಜೀವಬೆದರಿಕೆ ಹಾಕಿದ್ದಾನೆ ಎಂದು ಮಹಿಳೆ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.