ಮಂಗಳೂರು: ಬೆಂಗಳೂರಿನ ಜನ ಆರೋಗ್ಯ ಸಂಸ್ಥೆ ಎಪಿಡೀಮಿಯಾಲಜಿ ವಿಭಾಗ, ನಿಮಾನ್ಸ್ ವತಿಯಿಂದ ಅನುಷ್ಠಾನಗೊಳ್ಳುತ್ತಿರುವ ಹಾಗೂ ರಾಜ್ಯ ಸರಕಾರದ ಅನುದಾನಿತ ಯೋಜನೆಯಾದ ‘‘ ಯುವ ಜನರ ಮಾನಸಿಕ ಆರೋಗ್ಯಕ್ಕೆ ಪೂರಕ ಯುವ ಸ್ಪಂದನ ಸೇವೆಗಳ ಸಮಗ್ರ ಅಭಿವೃದ್ದಿ ಮತ್ತು ಅನುಷ್ಠಾನ ಯೋಜನೆ ’’ ಯುವ ಸ್ಪಂದನ ಅಡಿಯಲ್ಲಿ ಯುವ ಪರಿವರ್ತಕರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹತಾ ಮಾನದಂಡಗಳು : ಜಿಲ್ಲೆಗೆ ಯುವ ಪರಿವರ್ತಕರ ಸಂಖ್ಯೆ :ಕನಿಷ್ಠ 5 (ತಾಲೂಕಿಗೆ ಒಬ್ಬರಂತೆ) ( ಬಂಟ್ವಾಳ, ಸುಳ್ಯ, ಬೆಳ್ತಂಗಡಿ, ಮಂಗಳೂರು ಮತ್ತು ಮುಲ್ಕಿ-ಮೂಡಬಿದ್ರೆ ತಾಲೂಕು). ಪದವಿ ಹಾಗೂ ಮೇಲ್ಪಟ್ಟು (Psychology/ Social Work) ಪದವಿ ತೇರ್ಗಡೆ ಹೊಂದಿದವರಿಗೆ ಆದ್ಯತೆ ನೀಡಲಾಗುತ್ತದೆ.) ಕನಿಷ್ಠ ವಯಸ್ಸು : 21 ರಿಂದ 35 ವರ್ಷಗಳು.ಕೌಶಲ್ಯ:- ಸ್ಥಳೀಯ ಭಾಷೆ ಕನ್ನಡವನ್ನು ಸ್ಪಷ್ಟವಾಗಿ ಮಾತನಾಡುವುದು ಅವಶ್ಯಕ. ಸಮುದಾಯದಲ್ಲಿ ಕೆಲಸ ಮಾಡಲು ಆಸಕ್ತಿ ಹಾಗೂ ಹುಮ್ಮಸ್ಸನ್ನು ಹಾಗೂ ಉತ್ತಮ ಸಂವಹನ ಕೌಶಲ್ಯದ ಜೊತೆಗೆ ಸಂವಾದ ಕೌಶಲ್ಯಗಳನ್ನು ಹೊಂದಿರಬೇಕು. ಸಮುದಾಯದಲ್ಲಿ ಯುವಜನರಿಗೆ ತರಬೇತಿಯಂತಹ ಕಾರ್ಯಕ್ರಮಗಳನ್ನು ನಡೆಸುವುದು ಅವಶ್ಯವಿರುತ್ತದೆ.
ಅನುಭವ:- ಯುವಜನರ ವಿಷಯಗಳ ಕುರಿತು ಸಮುದಾಯದಲ್ಲಿ ಕೆಲಸ ಮಾಡಿರುವವರನ್ನು, ಮಾರ್ಗದರ್ಶನ/ಆಪ್ತ ಸಮಾಲೋಚನೆಯನ್ನು ಒದಗಿಸುವ ಕೌಶಲ್ಯವನ್ನು ಹೊಂದಿರಬೇಕು. ಅರ್ಜಿ ಸಲ್ಲಿಸುವವರು ತಮ್ಮ ವೈಯಕ್ತಿಕ ವಿವರ ಗಳನ್ನು ಬಿಳಿ ಹಾಳೆಯಲ್ಲಿ ತಮ್ಮ ಸಂಪೂರ್ಣ ವಿವರಗಳೊಂದಿಗೆ ಫೆಬ್ರವರಿ 25 ರ ಒಳಗಾಗಿ ಮಂಗಳೂರು ಮಂಗಳಾ ಕ್ರೀಡಾಂಗಣದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಗೆ ಸಲ್ಲಿಸಬೇಕು.ಹೆಚ್ಚಿನ ಮಾಹಿತಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಸಹಾಯಕ ನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.












