ಮಂಗಳೂರು:ದಿನದಿಂದ ದಿನಕ್ಕೆ ಬದಲಾಗುತ್ತಿರುವ ಈ ಶೈಕ್ಷಣಿಕ ಕ್ಷೇತ್ರದ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳಿಗೆ ವೃತ್ತಿಪರ ಶಿಕ್ಷಣದೊಂದಿಗೆ ನೈತಿಕ ಮೌಲ್ಯಗಳ ಶಿಕ್ಷಣಕ್ಕೂ ಒತ್ತು ನೀಡುತ್ತಾ ಬಂದಿರುವ ಸಂಸ್ಥೆ ತ್ರಿಶಾ ಸಮೂಹ ಸಂಸ್ಥೆ. ಈ ಸಂಸ್ಥೆಯು ಮಂಗಳೂರಿನ ಅಳಕೆಯಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದು ನೂತನ ಕಟ್ಟಡವು ಮಂಗಳೂರಿನ ವಿದ್ಯಾರ್ಥಿ ಗ್ರಾಮ, ಗಣೇಶ್ ಬಾಗ್ ಲೇಔಟ್, ಕೊಟ್ಟಾರ, ಬಂಗ್ರಾ ಕೂಳೂರಿನ ಪೋದಾರ್ ಇಂಟರ್ ನ್ಯಾಷನಲ್ ಸ್ಕೂಲ್ ಹತ್ತಿರ ಸ್ಥಳಾಂತರಗೊಳ್ಳುತ್ತಿದ್ದು, ಅದರ ಉದ್ಘಾಟನಾ ಕಾರ್ಯಕ್ರಮವು ಅಕ್ಟೋಬರ್ 4 ರಂದು ಹಲವು ಗಣ್ಯ ವ್ಯಕ್ತಿಗಳು, ಶಿಕ್ಷಣ ತಜ್ಞರು, ಹಾಗೂ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಬೆಳಿಗ್ಗೆ 10 ಗಂಟೆಗೆ ಜರುಗಲಿದೆ.
1998 ರಲ್ಲಿ ಸ್ಥಾಪನೆಗೊಂಡ ತ್ರಿಶಾ ಸಂಸ್ಥೆಯು ಶಿಕ್ಷಣ ಕ್ಷೇತ್ರದಲ್ಲಿ 26 ಸಂವತ್ಸರಗಳನ್ನು ಪೂರೈಸಿದ್ದು, ಉಡುಪಿ, ಮಂಗಳೂರು ಮತ್ತು ಬೆಂಗಳೂರಿನಲ್ಲಿ ತನ್ನ ಅಂಗಸಂಸ್ಥೆಯನ್ನು ಹೊಂದಿದ್ದು, ಸುಮಾರು 80,000 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಿದ್ಯಾದಾಸೋಹವನ್ನು ನೀಡಿದೆ. ಅಖಿಲ ಭಾರತ ಮಟ್ಟದಲ್ಲಿ ನಡೆಯುವ ಸಿಎ ಫೌಂಡೇಶನ್, ಸಿಎ ಇಂಟರ್ಮೀಡಿಯಟ್, ಸಿಎ ಫೈನಲ್, ಸಿಎಸ್ಇಇಟಿ, ಸಿಎಸ್ ಎಕ್ಸಿಕ್ಯೂಟಿವ್ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶವನ್ನು ಗಳಿಸಿಕೊಂಡ ಹೆಗ್ಗಳಿಕೆ ತ್ರಿಶಾ ಸಂಸ್ಥೆಯದ್ದು. 2017 ರಲ್ಲಿ ಕರ್ನಾಟಕ ಸರ್ಕಾರದ ಮಾನ್ಯತೆಯೊಂದಿಗೆ ಮಂಗಳೂರು ವಿ.ವಿ ಸಂಯೋಜನೆಗೆ ಒಳಪಟ್ಟು ಪದವಿ ಕಾಲೇಜು ಆಗಿ ಮಾರ್ಪಾಡುಗೊಂಡು ಮಂಗಳೂರು ಅಳಕೆಯಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡುವಲ್ಲಿ ವಿದ್ಯಾರ್ಥಿಗಳ ಮೆಚ್ಚಿನ ಕಲಿಕೆಯ ಸಂಸ್ಥೆಯಾಗಿದೆ.
ಇದೀಗ ನೂತನ ಕಟ್ಟಡವು ಹೊಸ ಕ್ಯಾಂಪಸ್ ನಲ್ಲಿ ನಿರ್ಮಾಣಗೊಂಡಿದ್ದು ಶಿಕ್ಷಣ ಕ್ಷೇತ್ರದಲ್ಲಿ ಇನ್ನಷ್ಟು ಹೆಚ್ಚಿನ ಪ್ರಗತಿಯನ್ನು ಸಾಧಿಸಲು ಸಜ್ಜಾಗಿದೆ.