ಮಂಗಳೂರು: ಮಂಗಳೂರಿನ ಕಡಲ ಕಿನಾರೆ ಮತ್ತೊಂದು ಅಂತಾರಾಷ್ಟ್ರೀಯ ಉತ್ಸವಕ್ಕೆ ಸಜ್ಜಾಗಿದೆ. ಈಗಾಗಲೇ ದೇಶ ವಿದೇಶದಲ್ಲಿ ಗಾಳಿಪಟಗಳ ಮೂಲಕ ಖ್ಯಾತಿ ಪಡೆದಿರುವ ಟೀಮ್ ಮಂಗಳೂರು ನೇತೃತ್ವದಲ್ಲಿ ಜ. 18 ಮತ್ತ 19ರಂದು ಅಂತಾರಾಷ್ಟ್ರೀಯ ಗಾಳಿ ಪಟ ಉತ್ಸವ ತಣ್ಣೀರುಬಾವಿ ಬೀಚ್‌ನಲ್ಲಿ ನಡೆಯಲಿದ್ದು, 11 ದೇಶಗಳು ಗಾಳಿಪಟ ತಂಡಗಳ ಜತೆಗೆ ಒರಿಸ್ಸಾ, ಕೇರಳ, ತೆಲಂಗಾಣ, ರಾಜಸ್ತಾನ, ಮಹಾರಾಷ್ಟ, ಗುಜರಾತ್‌ನ ಗಾಳಿಪಟ ತಂಡಗಳೂ ವೈವಿಧ್ಯಮಯ ಗಾಳಿಪಟಗಳೊಂದಿಗೆ ಮಂಗಳೂರಿನ ಕಡಲ ಬಾನಂಗಳದಲ್ಲಿ ಎರಡು ದಿನಗಳ ಕಾಲ ಚಿತ್ತಾರ ಮೂಡಿಸಲಿದ್ದಾರೆ.