ಮಂಗಳೂರಿನಲ್ಲಿ 24ರಿಂದ ನಾಂದಿ ರಂಗಾಯಣ ನಾಟಕೋತ್ಸವ.

ಮೈಸೂರು ರಂಗಾಯಣದ 2023-24 ನೆ ಸಾಲಿನ ಭಾರತೀಯ ರಂಗಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳ ಅಭಿನಯ ಮೂರು ನಾಟಕ ಗಳ ಪ್ರದರ್ಶನದ ನಾಂದಿ ನಾಟಕೋತ್ಸವವು, ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಸಹೋದಯ ಸಭಾಂಗಣದಲ್ಲಿ ಮೇ 24 ರಿಂದ 26 ರ ತನಕ ಪ್ರತಿದಿನ ಸಂಜೆ 7.00 ಕ್ಕೆ ನಡೆಯಲಿದೆ.

ಅರೆಹೊಳೆ ಪ್ರತಿಷ್ಠಾನ ಆಯೋಜಿಸಿರುವ ಈ ನಾಟಕೋತ್ಸವವು, ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ರಂಗ ಅಧ್ಯಯನ ಕೇಂದ್ರದ ಸಹಯೋಗದೊಂದಿಗೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕಲಾಭಿ (ರಿ) ಮಂಗಳೂರು ಸಹಕಾರದಲ್ಲಿ ನಡೆಯಲಿದೆ.

24 ರಂದು ಹೈಸ್ನಾಂ ತೊಂಬಾ ರಂಗ ಪಠ್ಯ, ನಿರ್ದೇಶನದ ವೃಕ್ಷರಾಜ, 25 ರಂದು ಕೀರ್ತಿನಾಥ ಕುರ್ತುಕೋಟಿ ರಚನೆಯ ಮಂಜುನಾಥ ಬಡಿಗೇರ ನಿರ್ದೇಶನದ ಆ ಮನಿ ಹಾಗೂ 26 ರಂದು ವಿಲಿಯಮ್ ಶೇಕ್ಸ್ ಪಿಯರ್ ರಚನೆಯ ವೆನಿಸಿನ ವ್ಯಾಪಾರ ನಾಟಕ ಅಮಿತ್ ರೆಡ್ಡಿ ನಿರ್ದೇಶನದ ನಾಟಕ ಪ್ರದರ್ಶನಗೊಳ್ಳಲಿದೆ. ಈ ಎಲ್ಲ ನಾಟಕಗಳಿಗೂ ಉಚಿತ ಪ್ರವೇಶ ಇದೆ ಎಂದು ರಂಗಾಯಣದ ಮುಖ್ಯಸ್ಥ ರಾಮನಾಥ್ ಮತ್ತು ಅರೆಹೊಳೆ ಪ್ರತಿಷ್ಠಾನದ ಗೌರವಾಧ್ಯಕ್ಷ ಡಾ. ಹರಿಕೃಷ್ಣ ಪುನರೂರು ಜಂಟಿಯಾಗಿ ಪ್ರಕಟಿಸಿದ್ದಾರೆ