ಬ್ರಹ್ಮಾವರ: ರೋಟರ್ಯಾಕ್ಟ್ ಕ್ಲಬ್ ಪದಗ್ರಹಣ

ಬ್ರಹ್ಮಾವರ: ರೋಟರ್ಯಾಕ್ಟ್ ಕ್ಲಬ್ ಬ್ರಹ್ಮಾವರದ ಪದಗ್ರಹಣ ಸಮಾರಂಭ ರೋಟರಿ ಸಭಾಭವನದಲ್ಲಿ ಜರುಗಿತು.

2023-24 ನೇ ಸಾಲಿನ ಅಧ್ಯಕ್ಷರಾದ ಅಪೂರ್ವ ರವರು 2024 25 ನೇ ಸಾಲಿನ ಅಧ್ಯಕ್ಷರಾದ ಅಮೃತ ರವರಿಗೆ ಅಧಿಕಾರ ಹಸ್ತಾಂತರಿಸಿದರು. ಪದಪ್ರಧಾನ ಅಧಿಕಾರಿಯಾಗಿ ರೋಟರಿ ಕ್ಲಬ್ ಬ್ರಹ್ಮಾವರದ ಅಧ್ಯಕ್ಷ ಆರೂರು ಶ್ರೀಧರ ವಿ ಶೆಟ್ಟಿ ಪದಪ್ರಧಾನ ನಡೆಸಿಕೊಟ್ಟರು.

ಮುಖ್ಯ ಅತಿಥಿಗಳಾಗಿ ಜಿಲ್ಲಾ ರೋಟರ್ಯಾಕ್ಟ್ ಸಭಾಪತಿ ನವೀನ್ ಅಮೀನ್, ಜಿಲ್ಲಾ ರೋಟರ್ಯಾಕ್ಟ್ ಪ್ರತಿನಿಧಿ ಚೇತನ್ ಕುಮಾರ್, ರೋಟರಿ ಕಾರ್ಯದರ್ಶಿ ಉದಯ ಪೂಜಾರಿ,ರೋಟರ್ಯಾಕ್ಟ್ ಸಭಾಪತಿ ಜಗದೀಶ್ ಕೆಮ್ಮಣ್ಣು ಉಪಸ್ಥಿತರಿದ್ದು ಶುಭ ಹಾರೈಸಿದರು.

ರೋಟರ್ಯಾಕ್ಟ್ ಅಧ್ಯಕ್ಷೆ ಅಪೂರ್ವ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಮಧುಸೂದನ್ ಅತಿಥಿಗಳನ್ನು ಪರಿಚಯಿಸಿದರು. ನೂತನ ವರ್ಷದ ಸಮಾಜ ಸೇವಾ ಕಾರ್ಯಕ್ರಮದ ಅಂಗವಾಗಿ ಮಮತಾ ಕರ್ಜೆಯವರಿಗೆ ಹೊಲಿಗೆ ಯಂತ್ರ ವಿತರಿಸಲಾಯಿತು. ಆರೂರು ಶ್ರೀಧರ ವಿ ಶೆಟ್ಟಿ ನವೀನ್ ಅಮೀನ್, ಚೇತನ್ ಕುಮಾರ್ ರವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ರೋಟರ್ಯಾಕ್ಟ್ ಉಪ ಜಿಲ್ಲಾ ಪ್ರತಿನಿಧಿ ಸುಧಾ ಭಟ್, ರೋಟರ್ಯಾಕ್ಟ್ ಜಿಲ್ಲಾ ಕಾರ್ಯದರ್ಶಿ, ಶಂಕರ್ ಕುಡ್ವ ಉಪಸ್ಥಿತರಿದ್ದರು. ಕಾರ್ತಿಕ್ ಬಾಸ್ರಿ ಕಾರ್ಯಕ್ರಮ ನಿರೂಪಿಸಿ, ಜೊತೆ ಕಾರ್ಯದರ್ಶಿ ರಕ್ಷಿತಾ ವಂಧಿಸಿದರು.