ಬ್ರಹ್ಮಾವರ: ರಸ್ತೆ ಅಪಘಾತ – ಬೈಕ್ ಸವಾರ ಸಾವು.

ಬ್ರಹ್ಮಾವರ: ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀದ ಉಪ್ಪೂರು ಬಳಿ ಸಂಭವಿಸಿದ ಅಪಘಾತದಲ್ಲಿ ಬೈಕ್‌ ಸವಾರ ಮೃತಪಟ್ಟ ಘಟನೆ ನಡೆದಿದೆ.

ಸಾವನ್ನಪ್ಪಿದವರು ಅಂಪಾರು ಮೂಡುಬಗೆಯ ಚೇತನ್‌ (18) ಎಂದು ತಿಳಿದು ಬಂದಿದೆ.

ಪುನೀತ್‌ ಅವರನ್ನು ಸಹ ಸವಾರನನ್ನಾಗಿ ಕುಳ್ಳಿರಿಸಿಕೊಂಡು ಉಡುಪಿ ಕಡೆ ತೆರಳುತ್ತಿದ್ದ ವೇಳೆ ಉಪ್ಪೂರು ಬಳಿ ಹೆದ್ದಾರಿ ದಾಟುತ್ತಿದ್ದ ಗಣೇಶ ಯು. ಸೇರ್ವೆಗಾರ್‌ ಅವರಿಗೆ ಢಿಕ್ಕಿ ಹೊಡೆದ ಬೈಕ್‌ ಬಳಿಕ ಡಿವೈಡರ್‌ ಮೇಲೇರಿ ಪಲ್ಟಿಯಾಯಿತು.

ತೀವ್ರವಾಗಿ ಗಾಯಗೊಂಡ ಮೂವರನ್ನು ಆಸ್ಪತ್ರೆಗೆ ಸಾಗಿಸಲಾಯಿತು.