ಬೈಲೂರು ಸರಕಾರಿ ಪದವಿ ಪೂರ್ವ ಕಾಲೇಜಿನ 17 ವಿದ್ಯಾರ್ಥಿಗಳು ಎನ್ ಎಂ ಎಂ ಎಸ್ ವಿದ್ಯಾರ್ಥಿ ವೇತನಕ್ಕೆ ಆಯ್ಕೆ.

ಬೈಲೂರು: 2023- 24 ನೇ ಶೈಕ್ಷಣಿಕ ವರ್ಷದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ನಡೆದ ರಾಷ್ಟ್ರಮಟ್ಟದಲ್ಲಿ ನಡೆಯುವ, ಎನ್ಎಂಎಂಎಸ್ ಪ್ರತಿಭಾನ್ವಿತ ಪರೀಕ್ಷೆಯಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಬೈಲೂರಿನ 17 ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗುವುದರ ಮುಖಾಂತರ,ಉಡುಪಿ ಜಿಲ್ಲೆಯಲ್ಲಿ ಅತಿ ಗರಿಷ್ಠ ವಿದ್ಯಾರ್ಥಿಗಳು ಈ ಸಂಸ್ಥೆಯಿಂದ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗಿರುತ್ತಾರೆ.

ವಿದ್ಯಾರ್ಥಿನಿ ದಿಯಾ ಜಿಲ್ಲಾ ಮಟ್ಟದಲ್ಲಿ ಅತಿ ಹೆಚ್ಚಿನ ಅಂಕವನ್ನು ಪಡೆದಿರುತ್ತಾಳೆ. ಈ ಸಂಸ್ಥೆಯಲ್ಲಿ ಹಲವಾರು ವರ್ಷಗಳಿಂದ ಎನ್ಎಂಎಂಎಸ್ ಪರೀಕ್ಷೆಗೆ ತರಬೇತಿಯನ್ನು ಉಚಿತವಾಗಿ ನೀಡಲಾಗುತ್ತಿದ್ದು, ಪ್ರತಿ ವರ್ಷವೂ ಈ ಸಂಸ್ಥೆಯಿಂದ ಅತಿಹೆಚ್ಚಿನ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗುವ ಮುಖಾಂತರ, ಈಗಾಗಲೇ ಲಕ್ಷಾನುಗಟ್ಟಲೆ ವಿದ್ಯಾರ್ಥಿವೇತನವನ್ನು ಈ ಸಂಸ್ಥೆಯ ವಿದ್ಯಾರ್ಥಿಗಳು ಪಡೆದಿರುತ್ತಾರೆ.

ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳ ಹೆಸರು:
ದಿಯಾ, ಸ್ವಸ್ತಿ ಪ್ರಭು, ಮನಸ್ವಿ ಶರ್ಮಾ, ಸ್ವೀಕೃತಿ, ಆದಿತ್ಯ ನಾಯಕ್, ನಿದೀಕ್ಷಾ, ಮೋಕ್ಷ, ನಿಧಿ, ವೈಷ್ಣವಿ, ಶೃತಿಕಾ, ಕೆ ಹರ್ಷಿತ್, ಶಯನ್ ಡಿ ಶೆಟ್ಟಿ, ಫಾತಿಮಾತುಲ್ ಹುದಾ, ಆಕಾಶ್ ಆಚಾರ್ಯ, ಶ್ರೀಶನ್ ಆರ್ ಪೂಜಾರಿ,ಆಜಾ ಎನ್ ಮತ್ತು ಪ್ರಾಚಿ ಹೆಗ್ಡೆ.