ಬೈಂದೂರು: ಮೀನು ಹಿಡಿಯಲು ಹೋಗಿ ವ್ಯಕ್ತಿ ಕಾಲು ಜಾರಿ ನದಿಗೆ ಬಿದ್ದು ಮೃತ್ಯು.

ಬೈಂದೂರು: ಬೈಂದೂರು ತಾಲೂಕಿನ ಬಡಾಕೆರೆ ಗ್ರಾಮದ ಕುದ್ರುವಿನ ಸೌಪರ್ಣಿಕ ನದಿಯಲ್ಲಿ ಗಾಳ ಹಾಕಿ ಮೀನು ಹಿಡಿಯಲು ಹೋದ ವ್ಯಕ್ತಿ ಕಾಲು ಜಾರಿ ನದಿಗೆ ಬಿದ್ದು ಸಾವನ್ನಪ್ಪಿದ ಘಟನೆ ಸೋಮವಾರ ಸಂಜೆ ನಡೆದಿದೆ.

ಮೃತ ವ್ಯಕ್ತಿಯನ್ನು ಬಡಾಕೆರೆ ಗ್ರಾಮದ ತೊಪ್ಲು ನಿವಾಸಿ ಮುಡೂರ ಎಂಬುವರ ಮಗ ಮಂಜು ಮೊಗವೀರ (57) ಎಂದು ಗುರುತಿಸಲಾಗಿದೆ.

ಮಂಜು ಮೊಗವೀರ ಸಮುದ್ರ ಮೀನುಗಾರಿಕೆ ವೃತ್ತಿ ಮಾಡಿಕೊಂಡಿದ್ದು, ತೂಫಾನ್ ಇದ್ದ ಕಾರಣ ಮೀನುಗಾರಿಕೆಗೆ ತೆರಳಿರಲಿಲ್ಲ. ಅದೇ ಕಾರಣಕ್ಕೆ ಮನೆಯಲ್ಲಿ ಕೂರಲು ಮನಸ್ಸಾಗದೇ ಸೌಪರ್ಣಿಕಾ ನದಿಗೆ ಗಾಳ ಹಾಕಿ ಮೀನು ಹಿಡಿದು ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.

ಸೋಮವಾರ ಸಂಜೆ ಎಂದಿನಂತೆ ತನ್ನ ಹೆಂಡತಿ ಬಡಕೆರೆ ಕುದ್ರುವಿನ ಬಳಿಯ ಸೌಪರ್ಣಿಕ ನದಿಯಲ್ಲಿ ಗಾಳ ಹಾಕಲು ತೆರಳಿದ್ದ ಮಂಜು ಮೊಗವೀರ ಕಾಲು ಜಾರಿ ನೀರಿಗೆ ಬಿದ್ದಿರಬಹುದು ಎಂದು ಅಂದಾಜಿಸಲಾಗಿದೆ.

ನಾಪತ್ತೆಯಾಗಿದ್ದ ಮಂಜು ಮೊಗವೀರರನ್ನು ಹುಡುಕಾಡಿದರೂ ಮೃತದೇಹ ಪತ್ತೆಯಾಗಿರಲಿಲ್ಲ. ಮಂಗಳವಾರ ಬೆಳಿಗ್ಗೆ ಮೃತದೇಹ ಪತ್ತೆಯಾಗಿದ್ದು, ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.