ಬ್ರಹ್ಮಾವರ: ದಿ ಬಾರ್ಕೂರು ಎಜ್ಯುಕೇಶನಲ್ ಸೊಸೈಟಿ (ರಿ) ಇದರ ಆಡಳಿತಕ್ಕೊಳಪಟ್ಟ ನ್ಯಾಷನಲ್ ಕೈಗಾರಿಕಾ ತರಬೇತಿ ಸಂಸ್ಥೆಯ ಎಂ.ಎಂ. ವಿ. ವಿಭಾಗದ ಹಳೆ ವಿದ್ಯಾರ್ಥಿಯಾದ ಭಾಸ್ಕರ್ ಇವರು ಸೌದಿ ಅರೇಬಿಯಾದಲ್ಲಿ ಪ್ರಸಿದ್ಧ ಕಾರು ತಯಾರಿಕಾ ಕಂಪನಿಯ ಉದ್ಯೋಗಿಯಾಗಿದ್ದು, ಇವರು ತಾನು ಕಲಿತ ಬಾರ್ಕೂರು ನ್ಯಾಷನಲ್ ಕೈಗಾರಿಕಾ ತರಬೇತಿ ಸಂಸ್ಥೆಗೆ ಭೇಟಿ ನೀಡಿ, ವಿಧ್ಯಾರ್ಥಿಗಳಿಗೆ ವಿದೇಶದಲ್ಲಿ ಉದ್ಯೋಗ ಪಡೆಯುವ ಬಗ್ಗೆ ವಿಶೇಷ ಮಾಹಿತಿ ನೀಡಿದರು.



 
								 
															





 
															 
															 
															











