ಬಾರ್ಕೂರು ನೇಶನಲ್ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ(ಐಟಿಐ) 2024-25ನೇ ಸಾಲಿನ ಪ್ರವೇಶಾತಿ ಪ್ರಾರಂಭ.

ಬಾರ್ಕೂರು ವಿದ್ಯಾಭಿವರ್ದಿನಿ ಸಂಘದ ಆಡಳಿತಕ್ಕೊಳಪಟ್ಟ “ನೇಶನಲ್ ಕೈಗಾರಿಕಾ ತರಬೇತಿ ಸಂಸ್ಥೆ”ಯು ದಿನಾಂಕ 01-08-1984ರಂದು ಪ್ರಾರಂಭಗೊಂಡು ಉಡುಪಿ ಜಿಲ್ಲೆಯಲ್ಲೇ ಪ್ರಥಮ ಕೈಗಾರಿಕಾ ತರಬೇತಿ ಸಂಸ್ಥೆಯಾಗಿ ಹೆಸರು ಪಡೆಯಿತು. ಭಾರತ ಸರ್ಕಾರದ ರಾಷ್ಟ್ರೀಯ ವೃತ್ತಿ ಶಿಕ್ಷಣ ಪರಿಷತ್ (National Council for Vocational Training)ನೊಂದಿಗೆ ಸಂಯೋಜನೆ ಹೊಂದಿದ್ದು ರಾಜ್ಯ ಸರಕಾರದ ಉದ್ಯೋಗ ಮತ್ತು ತರಬೇತಿ ಇಲಾಖೆಯ ಅಡಿಯಲ್ಲಿ ತರಬೇತಿಯನ್ನು ನೀಡುತ್ತಿರುವ ಅನುದಾನಿತ ಸಂಸ್ಥೆಯಾಗಿರುತ್ತದೆ.

ಸಂಸ್ಥೆಯಿಂದ ಸಾವಿರಾರು ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣ ತರಬೇತಿ:
40 ವರ್ಷಗಳ ಹಿಂದೆ ಅಂದಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಕೀರ್ತಿಶೇಷ ವಿ.ಎಲ್. ರೋಚ್‌ರವರ ದೂರದರ್ಶಿತ್ವದಿಂದ ಗ್ರಾಮೀಣ ಪ್ರದೇಶದಲ್ಲಿ ಸ್ಥಾಪನೆಯಾಗಿರುವ ಈ ಸಂಸ್ಥೆಯು ದಿನೇ ದಿನೇ ಬೆಳೆದು ಹೆಮ್ಮರವಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣ ನೀಡುವಲ್ಲಿ ಸಫಲತೆಯನ್ನು ಪಡೆದಿದೆ. ಕೇವಲ ಎರಡೇ ವರ್ಷಗಳಲ್ಲಿ ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣವನ್ನು ನೀಡಿ, ಅವರನ್ನು ಸ್ವಾವಲಂಬಿಗಳನ್ನಾಗಿ ರೂಪಿಸುವಲ್ಲಿ ನಮ್ಮ ನೇಶನಲ್ ಕೈಗಾರಿಕಾ ತರಬೇತಿ ಸಂಸ್ಥೆ ಮಹತ್ತರ ಪಾತ್ರವನ್ನು ವಹಿಸಿದೆ.

ನೇಶನಲ್ ಕೈಗಾರಿಕಾ ತರಬೇತಿ ಸಂಸ್ಥೆಯ ಐಟಿಐ ಕೋರ್ಸ್ಗಳು:
2 ವರ್ಷ ಅವದಿಯ ಇಲೆಕ್ಟ್ರೀಷಿಯನ್, ಫಿಟ್ಟರ್ (ಜನರಲ್ ಮೆಕ್ಯಾನಿಕ್), ಮೆಕ್ಯಾನಿಕ್ ಮೋಟಾರ್ ವೆಹಿಕಲ್ (ಅಟೋಮೊಬೈಲ್), ಇಲೆಕ್ಟ್ರಾನಿಕ್ ಮ್ಯಾಕಾನಿಕ್ ಹಾಗೂ ಒಂದು ವರ್ಷ ಅವಧಿಯ ವೆಲ್ಡರ್ (ಫ್ಯಾಬ್ರಿಕೇಶನ್) ವಿಭಾಗಗಳಲ್ಲಿ ತರಬೇತಿಯನ್ನು ನೀಡುತ್ತಾ ಬಂದಿರುತ್ತದೆ. ಎಸ್.ಎಸ್.ಎಲ್.ಸಿ ಪಾಸ್, ಪಿಯುಸಿ ಪಾಸ್/ಫೇಲ್ ಆದ ವಿದ್ಯಾರ್ಥಿಗಳು/ ವಿದ್ಯಾರ್ಥಿನಿಯರು ನಮ್ಮ ಸಂಸ್ಥೆಗೆ ಸೇರಿ ಕೇವಲ 2 ವರ್ಷ ತಾಂತ್ರಿಕ ಶಿಕ್ಷಣವನ್ನು ಮುಗಿಸಿ ಸ್ವಾವಲಂಭಿಗಳಾಗಿ ಅಥವಾ ಉತ್ತಮ ಉದ್ಯೋಗ ಪಡೆದು ಜೀವನ ನಿರ್ವಹಣೆ ಮಾಡುವಲ್ಲಿ ಯಶಸ್ವಿಯಾಗಬಹುದಾಗಿದೆ.ಮಹಿಳಾ ಅಭ್ಯರ್ಥಿಗಳ ತರಬೇತಿಗೆ ವಿಶೇಷ ಅವಕಾಶಗಳಿವೆ. ಸಂಸ್ಥೆಗೆ ಸೇರಬಯಸುವ ವಿದ್ಯಾರ್ಥಿಗಳು ಕಛೇರಿಯಿಂದ ಅರ್ಜಿ ಫಾರಂಗಳನ್ನು ಪಡೆದು ಭರ್ತಿ ಮಾಡಿ ಸಲ್ಲಿಸಿ ಅವರಿಗೆ ಬೇಕಾದ ಕೋರ್ಸ್ಗಳನ್ನು ಆಯ್ಕೆ ಮಾಡಿ ಸೇರಬಹುದಾಗಿರುತ್ತದೆ.

ಕಂಪನಿಗಳಿಂದ ಕ್ಯಾಂಪಸ್ ಇಂಟರ್ವ್ಯೂ:
ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಉತ್ತಮ ಉದ್ಯೋಗವನ್ನು ಕೊಡಿಸುವ ಬಗ್ಗೆ ಚಿಂತನೆ ನಡೆಸಿ ಪ್ರತಿ ವರ್ಷ ಹಲವು ಕಂಪನಿಗಳಿಂದ ಕ್ಯಾಂಪಸ್ ಇಂಟರ್ವ್ಯೂ ಮಾಡುತ್ತಾ ಬಂದಿರುತ್ತೇವೆ. ಇದೆ ಮೇ ತಿಂಗಳ ಮೇ.14, ಮೇ.16, ಮೇ.20, ಮೇ.21 ಜೂ.3, ಜೂ.5, ಜೂ.7,ಜೂ.10,ಜೂ.15 ರಂದು ವಿವಿಧ ಕಂಪನಿಗಳಿಂದ ಕ್ಯಾಂಪಸ್ ಇಂಟರ್ವ್ಯೂ ನಡೆಯಲಿದೆ. 20 ಮತ್ತು 21 ರಂದು ಪ್ರತಿಷ್ಠಿತ ಕಂಪನಿಯಾದ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಪ್ರೈ.ಲಿ. ಇವರಿಂದ ಕ್ಯಾಂಪಸ್ ಇಂಟರ್ವ್ಯೂ ಇರುತ್ತದೆ.

ಅರ್ಹ ವಿದ್ಯಾರ್ಥಿಗಳು ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ ಎಂದು ನ್ಯಾಷನಲ್ ಕೈಗಾರಿಕಾ ತರಬೇತಿ ಸಂಸ್ಥೆ ಹೇರಾಡಿ ಬಾರ್ಕೂರು ಪ್ರಾಂಶುಪಾಲರು ಪ್ರಕಟಣೆ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9448309075
9481509052
9448579101