ಬಂಟ್ವಾಳ: ವಿದ್ಯುತ್ ಶಾಕ್’ಗೆ ವ್ಯಕ್ತಿ ಬಲಿ.

ಬಂಟ್ವಾಳ: ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಇರಾದಲ್ಲಿ ವ್ಯಕ್ತಿಯೋರ್ವನಿಗೆ ಸಿಡಿಲು ಬಡಿದು ವಿದ್ಯುತ್ ಶಾಕ್ ಹೊಡೆದು ಮೃತಪಟ್ಟ ಘಟನೆ ನಡೆದಿದೆ.

ಇರಾ ಗ್ರಾಮದ ಮುರ್ಕಾಜೆ ನಿವಾಸಿ ಸತೀಶ್ ಚೌಟ (43) ಮೃತಪಟ್ಟ ವ್ಯಕ್ತಿ. ಸತೀಶ್ ಅವರು ಬಾಕ್ರಬೈಲಿನಲ್ಲಿ ಮರದ ಮಿಲ್ ನಲ್ಲಿ ಕೆಲಸಗಾರನಾಗಿದ್ದು, ಗುರುವಾರ ರಸ್ತೆಯ ಬದಿಯಲ್ಲಿ ಟ್ರಾನ್ಸ್ ಫಾರ್ಮರ್ ಪಕ್ಕದಲ್ಲಿ ನಿಂತುಕೊಂಡಿರುವ ಸಮಯದಲ್ಲಿ ಆಕಸ್ಮಿಕವಾಗಿ ಸಿಡಿಲು ಬಡಿದು, ಒಮ್ಮೆಲೇ ವಿದ್ಯುತ್ ಪ್ರವೇಶಿಸಿ ಮೃತಪಟ್ಟ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.