ಬಂಟ್ವಾಳ : ಆ.11ರಂದು ಮಡಿವಾಳರ ಜಿಲ್ಲಾ ಮಟ್ಟದ ‘ಕೆಸರ್ ಡೊಂಜಿ ದಿನ -2024’ ಕಾರ್ಯಕ್ರಮ

ಬಂಟ್ವಾಳ: ತಾಲೂಕು ಮಡಿವಾಳ ಸಮಾಜ ಸೇವಾ ಸಂಘ ಹಾಗೂ ಮಡಿವಾಳ ಯುವ ಬಳಗ ಬಂಟ್ವಾಳ ಮತ್ತು ಮಹಿಳಾ ಘಟಕ ಇದರ ಆಶ್ರಯದಲ್ಲಿ, ದಕ್ಷಿಣ ಕನ್ನಡ ಜಿಲ್ಲಾ ಮಡಿವಾಳರ ಸಂಘದ ಸಹಕಾರದೊಂದಿಗೆ ಬಿ.ಸಿ. ರೋಡ್ ಸ್ಪರ್ಶಾ ಕಲಾ ಮಂದಿರ ಇದರ ಕೆಸರು ಗದ್ದೆಯಲ್ಲಿ ಆ.11 ನಡೆಯುವ ಕೆಸರ್ ಡೊಂಜಿ ದಿನ -2024 ಇದರ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮ ನಡೆಯಿತು.

ತಾಲೂಕು ಸಂಘ ಅಧ್ಯಕ್ಷ ಹರೀಶ್ ಮಂಕುಡೆ, ಗೌರವಧ್ಯಕ್ಷರಾದ ಎನ್.ಕೆ ಶಿವ ಖಂಡಿಗ,ಕಾರ್ಯದರ್ಶಿ ಜಗದೀಶ್ ಖಂಡಿಗ ದ.ಕ ಜಿಲ್ಲಾ ಸಂಘದ ಕಾರ್ಯದರ್ಶಿ ರಾಮ ಮಂಕುಡೆ,ಯುವ ಬಳಗದ ಅಧ್ಯಕ್ಷ ಸಂದೇಶ್ ಕೊಯಿಲ,ಕಾರ್ಯದರ್ಶಿ ವಕ್ಷಿತ್ ಇನೋಳಿ,ಮಹಿಳಾ ಘಟಕ ಅಧ್ಯಕ್ಷೆ ಶೋಭಾ ಪಂಜಿಕಲ್ಲು, ಗೌರವ ಸಲಹೆಗಾರರಾದ ಸೋಮಪ್ಪ ಮಾಸ್ಟರ್ ರಾಯಿ, ಸುಧಾಕರ ಬಿ.ಸಿರೋಡ್, ಪುಷ್ಪರಾಜ್ ಕುಕ್ಕಾಜೆ, ಯೋಗೀಶ್ ಕಲಸಡ್ಕ, ಎಮ್.ಜಿ ನವೀನ್ ಕಂದೂರು, ಸುಂದರ ಪೆರಾಜೆ,ವೆಂಕಟೇಶ ಅನಂತಾಡಿ ಇದ್ದರು.

ದಕ್ಷಿಣ ಕನ್ನಡ ಮತ್ತು ಉಡುಪಿ ಹಾಗೂ ಕಾಸರಗೋಡು ಜಿಲ್ಲಾ ಮಡಿವಾಳ ಸಮಾಜ ಬಾಂಧವರಿಗೆ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಬೆಳಗ್ಗೆ 9 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.