ಬಂಟಕಲ್ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯ: ವಿದ್ಯಾರ್ಥಿಗಳಿಂದ ವಿಭಿನ್ನ ವಿಧಾನದಿಂದ ಮಧುಮೇಹ ಪತ್ತೆ, ನಿಯಂತ್ರಿಸುವ ವೈಬ್ ಸೈಟ್ ಅಭಿವೃದ್ಧಿ

ಉಡುಪಿ: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಗಣಕಯಂತ್ರ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಆರೋನ್ ಶರೋನ್ ಡಿಸೋಜಾ, ದೃಶ್ಯ ಶೆಟ್ಟಿ, ಮಿಸ್ಬಾ ಬಾನು ಮುನೀರ್ ಮತ್ತು ಪೀಟರ್ ಕೇಟಾನೋ ಜೋವೋ ಇವರು ವಿಭಾಗದ ಪ್ರಾಧ್ಯಾಪಕಿಯಾದ ಶ್ರೀಮತಿ ಚೈತ್ರಾ ಇವರ ಮಾರ್ಗದರ್ಶನದಲ್ಲಿ ಎರಡು ವಿಭಿನ್ನ ವಿಧಾನವನ್ನು ಬಳಸಿಕೊಂಡು ಮಧುಮೇಹವನ್ನು ಪೂರ್ವಾಭಾವಿಯಾಗಿ ಪತ್ತೆ ಹಚ್ಚುವುದು ಮತ್ತು ಅದನ್ನು ನಿಯಂತ್ರಿಸುವ ವೈಬ್ ಸೈಟನ್ನು ಅಭಿವೃದ್ಧಿ ಪಡಿಸಿದ್ದಾರೆ.

ಈ ವೈಬ್ ಸೈಟ್‍ನಲ್ಲಿ ಎರಡೂ ವಿಧಾನಗಳಲ್ಲಿ ಮಧುಮೇಹವನ್ನು ಪತ್ತೆಹಚ್ಚಬಹುದು. ಒಂದು ಉಪವಾಸ ಮತ್ತು ರಕ್ತದ ಸಕ್ಕರೆ ಮಟ್ಟವನ್ನು ಆಧರಿಸಿ, ಇನ್ನೊಂದು ಗ್ಲೂಕೋಸ್ ಮಟ್ಟ, ರಕ್ತದೊತ್ತಡ ಮತ್ತು ವಯಸ್ಸನ್ನು ಆಧರಿಸಿ ಮಧುಮೇಹವನ್ನು ಪತ್ತೆಹಚ್ಚುವುದಾಗಿದೆ. ಈ ವ್ಯವಸ್ಥೆಯನ್ನು ಬಳಸುವ ವ್ಯಕ್ತಿಗೆ ಮಧುಮೇಹದ ಸ್ಥಿತಿಗೆ ಅನುಗುಣವಾಗಿ ಆಹಾರ ಪದ್ಧತಿ, ಆರೋಗ್ಯ ನಿರ್ವಹಣೆಯ ಬಗ್ಗೆ ಮಾಹಿತಿ ತಿಳಿದುಕೊಂಡು ತಮ್ಮ ಆರೋಗ್ಯಕ್ಕೆ ಅನುಗುಣವಾಗಿ ತಮ್ಮ ಜೀವನ ಶೈಲಿಯನ್ನು ಬದಲಾಯಿಸಿ ಕೊಳ್ಳಲು ಸಹಕಾರಿಯಾಗಿದೆ.

ಈ ಯೋಜನೆಗೆ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್, ಗಣಕ ಯಂತ್ರ ವಿಭಾಗದ ಮುಖ್ಯಸ್ಥರಾದ ಡಾ. ಸೌಮ್ಯ ಜೆ ಭಟ್ ರವರು ಅಭಿನಂದಿಸಿರುತ್ತಾರೆ.