ಬಂಟಕಲ್: ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ರಾಷ್ಟ್ರೀಯ ಯುವದಿನದ ಬಗ್ಗೆ ಪ್ರೇರಣಾತ್ಮಕ ಉಪನ್ಯಾಸ ಕಾರ್ಯಕ್ರಮ

ಬಂಟಕಲ್: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾಯೋಜನೆಯ ವತಿಯಿಂದ ವಿದ್ಯಾಸಂಸ್ಥೆಯ ಇನ್ನೋವೇಶನ್ ಘಟಕ ಮತ್ತು ಮೂಲ ವಿಜ್ಞಾನ ವಿಭಾಗದ ಸಹಯೋಗದೊಂದಿಗೆ ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆಯ ಮನೋಭಾವವನ್ನು ಉತ್ತೇಜಿಸುವ ಸಲುವಾಗಿ ರಾಷ್ಟ್ರೀಯ ಯುವದಿನದ ಅಂಗವಾಗಿ ಸುಸ್ಥಿರ ಭವಿಷ್ಯಕ್ಕಾಗಿ ಯುವಕರು”ಎಂಬ ವಿಷಯದ ಕುರಿತು ಶುಕ್ರವಾರ ದಿನಾಂಕ 17 ಜನವರಿ 2025 ರಂದು ಉಪನ್ಯಾಸವನ್ನು ಆಯೋಜಿಸಲಾಗಿತ್ತು.

ಈ ಉಪನ್ಯಾಸದಲ್ಲಿ ಶ್ರೀ ಗೌತಮ ನಾವಡ, ನಿರ್ದೇಶಕರು, ಫೋರ್ತ್ ಫೋಕಸ್ ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಯಶಸ್ವಿ ಉದ್ಯಮಿಯಾಗಲು ಎದುರಿಸಿದ ಸವಾಲುಗಳು ಮತ್ತು ತಮ್ಮ ಕನಸನ್ನು ಸಾಕಾರಗೊಳಿಸಲು ಪಟ್ಟ ಶ್ರಮವನ್ನು ಪ್ರೇರಣಾತ್ಮಕವಾಗಿ ವಿದ್ಯಾರ್ಥಿಗಳಿಗೆ ವಿವರಿಸಿದರು.

ಉದ್ಯಮಶೀಲತೆ ಎಂದರೆ ಕೇವಲ ಯಶಸ್ಸು ಸಾಧಿಸುವುದು ಮಾತ್ರವಲ್ಲ ವಿಫಲತೆಯನ್ನು ಸ್ವೀಕರಿಸಿ ಅನುಭವಗಳನ್ನು ಪಡೆದುಕೊಳ್ಳಬೇಕು ಎಂದೂ ಈ ಸಂದರ್ಭದಲ್ಲಿ ತಿಳಿಹೇಳಿದರು. ಅವರು ನೀಡಿದ ಪ್ರಾಯೋಗಿಕ ಸಲಹೆಗಳು ವಿದ್ಯಾರ್ಥಿಗಳಿಗೆ ತುಂಬಾ ಸೂಕ್ತವೆನಿಸಿತ್ತು.

ರಾಷ್ಟ್ರೀಯ ಸೇವಾಯೋಜನೆಯ ಸಂಯೋಜಕರಾದ ಶ್ರೀ ಸಚಿನ್ ಪ್ರಭು ಇವರು ಅತಿಥಿಗಳನ್ನು ಸ್ವಾಗತಿಸಿದರು. ಈ ಕಾರ್ಯಕ್ರಮದಲ್ಲಿ ವಿವಿಧ ವಿಭಾಗದ ಮುಖ್ಯಸ್ಥರು ಮತ್ತು ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.