ಬಂಟಕಲ್ ನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಎಂಬಿಎ ವಿದ್ಯಾರ್ಥಿಗಳಿಂದ “ಫುಡ್ ಪೆಸ್ಟ್”

ಬಂಟಕಲ್ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಎಂಬಿಎ ವಿದ್ಯಾರ್ಥಿಗಳಿಗೆ ಬೆಂಕಿಯಿಲ್ಲದೆ ಅಡುಗೆ ಎಂಬ ಶೀರ್ಷಿಕೆಯಡಿ “ಫುಡ್ ಪೆಸ್ಟ್” ಅನ್ನು ದಿನಾಂಕ 25 ಮೇ 2024ರಂದು ಆಯೋಜಿಸಲಾಗಿತ್ತು.

ಈ ಪೆಸ್ಟ್ ನ ಮುಖ್ಯ ಉದ್ದೇಶ ವಿದ್ಯಾರ್ಥಿಗಳ ಪಾಕ ಪ್ರಾವಿಣ್ಯತೆ, ವ್ಯವಹಾರ ಕೌಶಲ್ಯ, ಉದ್ಯಮಶೀಲತೆ, ಮಾರುಕಟ್ಟೆ, ಲೆಕ್ಕಪತ್ರ ನಿರ್ವಹಣೆ ಮತ್ತು ಹಣಕಾಸು ವ್ಯವಹಾರದ ಬಗ್ಗೆ ತಿಳಿಸಿಕೊಡುವುದಾಗಿದೆ.

ಈ ಕಾರ್ಯಕ್ರಮವನ್ನು ಸಂಸ್ಥೆಯ ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್ ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮಗಳಲ್ಲಿ ಹೆಚ್ಚು ಭಾಗವಹಿಸುವಂತೆ
ಪ್ರೋತ್ಸಾಹಿಸಿದರು. ಈ “ಫುಡ್ ಪೆಸ್ಟ್” ನಲ್ಲಿ 4 ವಿದ್ಯಾರ್ಥಿಗಳಂತೆ ಒಟ್ಟು 5 ತಂಡಗಳು ಭಾಗವಹಿಸಿದ್ದು, ವಿವಿಧ ಬಗೆಯ ಸಿಹಿ ತಿಂಡಿಗಳು ಮತ್ತು ಪಾನೀಯಗಳನ್ನು ತಯಾರಿಸಿದ್ದರು. ಎಂ ಬಿ ಎ ವಿಭಾಗದ ನಿರ್ದೇಶಕರಾದ ಡಾ. ಸೂರಜ್ ಪ್ರಾನ್ಸಿಸ್ ನೊರೊನ್ಹಾ, ಡೀನ್‍ಗಳು, ವಿವಿಧ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರು, ಅಧ್ಯಾಪಕರು ಮತ್ತು ಸಿಬ್ಬಂದಿ ವರ್ಗದವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.