ಬಂಟಕಲ್: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಆದಿತ್ಯ, ಅತುಲ್, ಬಲರಾಮ್ ಬಾರಧ್ವಜ್, ಅಲಕ ಮತ್ತು
ರಾಖಿ, ಶರಣ್ಯ, ರಜನಿ ಇವರುಗಳು ಆರ್ಡಿನೊ ಪ್ರೊಗ್ರಾಮಿಂಗ್ ಮತ್ತು ಪ್ರಾಜೆಕ್ಟ್ ತಯಾರಿಕೆ ಕುರಿತಾಗಿ ಪ್ರಾಯೋಗಿಕ ಕಲಿಕಾ
ಮಾರ್ಗದರ್ಶನ ಕಾರ್ಯಾಗಾರವನ್ನು ಎಪ್ರಿಲ್ 8, 2025 ರಂದು ಸರಸ್ವತಿ ವಿದ್ಯಾಲಯ ಇಂಗ್ಲಿಷ್ ಮಾಧ್ಯಮ ಶಾಲೆ, ಗಂಗೊಳ್ಳಿ ಇಲ್ಲಿನ ಅಟಲ್ ಟಿಂಕರಿಂಗ್ ಲ್ಯಾಬ್‌ನಲ್ಲಿ ನಡೆಸಿಕೊಟ್ಟರು.

ವಿದ್ಯಾರ್ಥಿಗಳು ಪ್ರಾಯೋಗಿಕ ಸಂವಹನದ ಮೂಲಕ ರೊಬೋಟಿಕ್ಸ್, ಎಲೆಕ್ಟ್ರಾನಿಕ್ಸ್ ಮತು ಪ್ರೋಗ್ರಾಮಿಂಗ್ ನಂತಹ ಮೂಲಭೂತ ಪರಿಕಲ್ಪನೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಭೌತಿಕ ಮೂಲಮಾದರಿಯ ಜೊತೆಗೆ ವಿದ್ಯಾರ್ಥಿಗಳಿಗೆ ಟಿಂಕರ್‌ಕ್ಯಾಡ್ ಎಂಬ ಆನ್‌ಲೈನ್ ಸಿಮ್ಯುಲೇಶನ್ ಪರಿಕರವನ್ನು ಸಹ ಪರಿಚಯಿಸಲಾಯಿತು.

ಇದು ಸರ್ಕ್ಯೂಟ್‌ಗಳನ್ನು ವಿನ್ಯಾಸಗೊಳಿಸಲು ಮತ್ತು ಪರೀಕ್ಷಿಸಲು ಸಹಾಯಕವಾಗಿದೆ. ಈ ಕಾರ್ಯಾಗಾರವನ್ನು ಗಣಕಯಂತ್ರ ವಿಭಾಗದ ಪ್ರಾಧ್ಯಾಪಕರಾದ ಶ್ರೀ ರಾಘವೇಂದ್ರ ಈಶ್ವರ್ ಹೆಗ್ಡೆ ಮತ್ತು ದೀಪಕ್ ರಾವ್ ಇವರು ಸಂಯೋಜಿಸಿದರು.
ಸರಸ್ವತಿ ವಿದ್ಯಾಲಯ ಇಂಗ್ಲಿಷ್ ಮಾಧ್ಯಮ ಶಾಲೆಯ
ಮುಖ್ಯೋಪಾಧ್ಯಾಯರು, ಅಧ್ಯಾಪಕರು ಮತ್ತು ಸಿಬ್ಬಂದಿಗಳು ಈ ಕಾರ್ಯಕ್ರಮವನ್ನು ನಡೆಸಲು ಸಹಕರಿಸಿದರು.
ವಿದ್ಯಾರ್ಥಿಗಳ ಕೌಶಲ್ಯಗಳನ್ನು ಅಭಿವೃದ್ದಿಪಡಿಸಲು ಮತ್ತು
ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್, ಗಣಿತದ ಬಗ್ಗೆ ಪ್ರಾಯೋಗಿಕ ಚಟುವಟಿಕೆಗಳ ಮೂಲಕ ಕಲಿಯಲು ಸಹಾಯ ಮಾಡುವ ಉದ್ದೇಶದಿಂದ ಅಟಲ್ ಟಿಂಕರಿಂಗ್ ಲ್ಯಾಬ್‌ಗಳನ್ನು ಸರ್ಕಾರದಿಂದ ಸ್ಥಾಪಿಸಲಾಗಿದೆ.












